ವಾಷಿಂಗ್ಟನ್: 1990ರ ದಶಕದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ದೋಷಾರೋಪಣೆಗೆ ಕಾರಣವಾದ ಪ್ರಸಿದ್ಧ ಪ್ರಾಸಿಕ್ಯೂಟರ್ ಕೆನ್ನೆತ್ ಸ್ಟಾರ್, ಇದೀಗ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ವಾದ ಮಂಡನೆ ಮಾಡಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಕ್ಲಿಂಟನ್ ಆಡಳಿತದ ಅವಧಿಯಲ್ಲಿ ಸ್ವತಂತ್ರ ವಕೀಲರ ಕಚೇರಿಯಲ್ಲಿ ಸ್ಟಾರ್ ಅವರ ಉತ್ತರಾಧಿಕಾರಿಯಾದ ಸಾಂವಿಧಾನಿಕ ವಕೀಲ ಅಲನ್ ಡೆರ್ಶೋವಿಟ್ಜ್ ಮತ್ತು ರಾಬರ್ಟ್ ರೇ ಕೂಡ ಈ ತಂಡಕ್ಕೆ ಸೇರುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.