ಕರ್ನಾಟಕ

karnataka

ETV Bharat / international

ಕ್ವಾಡ್ ಶೃಂಗಸಭೆಯಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾಗಿ

ಕ್ವಾಡ್ ಶೃಂಗಸಭೆಯಲ್ಲಿ ಯುಎಸ್​ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಕ್ವಾಡ್ ಶೃಂಗಸಭೆಯಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾಗಿ
ಕ್ವಾಡ್ ಶೃಂಗಸಭೆಯಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭಾಗಿ

By

Published : Mar 12, 2021, 10:14 AM IST

ನ್ಯೂಯಾರ್ಕ್: ಕ್ವಾಡ್​ ಶೃಂಗಸಭೆಯಲ್ಲಿ ಯುಎಸ್​ ಅಧ್ಯಕ್ಷ ಜೋ ಬೈಡನ್, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್‌ನ ಯೋಶಿಹೈಡ್ ಸುಗಾ ಅವರೊಂದಿಗೆ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಸಹ ಭಾಗವಹಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ವರ್ಚುವಲ್ ಶೃಂಗಸಭೆಯನ್ನು ವಾಷಿಂಗ್ಟನ್‌ನಲ್ಲಿ ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಮಧ್ಯಾಹ್ನ (ಭಾರತ ಸಮಯ: ರಾತ್ರಿ 10.30) ಸಭೆಯ ವಾಚನಗೋಷ್ಠಿಯನ್ನು ನೀಡಲಿದ್ದಾರೆ ಎಂದು ಬೈಡನ್ ವಕ್ತಾರ ಜೆನ್ ಸಾಕಿ ಹೇಳಿದ್ದಾರೆ.

ಇದನ್ನೂ ಓದಿ:ಮಾ.12 ರಂದು ಕ್ವಾಡ್ ಶೃಂಗಸಭೆ: ಚೀನಾದ ಅಪಾಯಕಾರಿ ನಡೆ ಬಗ್ಗೆ ಎಚ್ಚರಿಸಿದ ಜಪಾನ್

ಆಸ್ಟ್ರೇಲಿಯಾ, ಭಾರತ, ಜಪಾನ್ ಹಾಗೂ ಅಮೆರಿಕದ ನಾಯಕರನ್ನು ಒಳಗೊಂಡ ಪ್ರಥಮ ಕ್ವಾಡ್​ (ಕ್ವಾಡ್ರಿಲ್ಯಾಟರಲ್​ ಏಷ್ಯನ್​ ಆರ್ಚ್​ ಆಫ್​ ಡೆಮಾಕ್ರಸಿ) ಶೃಂಗಸಭೆ ಇಂದು ನಡೆಯಲಿದೆ.

ABOUT THE AUTHOR

...view details