ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಆಗಿರುವ ಕಮಲಾ ಹ್ಯಾರಿಸ್(Kamala Harris) 1 ಗಂಟೆ 25 ನಿಮಿಷಗಳ ಕಾಲ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಇತಿಹಾಸ ಬರೆದಿದ್ದಾರೆ. ಈ ವಿಷಯವನ್ನು ಶ್ವೇತ ಭವನ ತಿಳಿಸಿದೆ.
57 ವರ್ಷದ ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷೀಯ ಅಧಿಕಾರ ಚಲಾಯಿಸುವ ಮೂಲಕ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ವತಃ ಅಮೆರಿಕದ ಅಧ್ಯಕ್ಷ ಜೋ ಬೈಡನ್ ( President Joe Biden) ಅವರು ಅಧಿಕಾರ ಹಸ್ತಾಂತರಿಸಿದ್ದರು. ಅಧ್ಯಕ್ಷ ಜೋ ಬೈಡನ್ ಅವರಿಗೆ ಅರವಳಿಕೆ ಔಷಧಿ ನೀಡಿದ್ದ ಹಿನ್ನೆಲೆ ತಾತ್ಕಾಲಿಕವಾಗಿ ಅಧಿಕಾರ ಹಸ್ತಾಂತರವಾಗಿತ್ತು.
ಏತಕ್ಕಾಗಿ ಈ ನಿರ್ಧಾರ?: