ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅವರು ಕೊರೊನಾ ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಾರೆ. ಲಸಿಕೆಯ ಸುರಕ್ಷತೆಯ ಬಗ್ಗೆ ಅಮೆರಿಕದ ಸಾರ್ವಜನಿಕರಿಗೆ ಧೈರ್ಯ ತುಂಬುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮವನ್ನು ನೇರಪ್ರಸಾರ ಮಾಡಲಾಯಿತು.
ಡೆಲವೇರ್ನ ಕ್ರಿಸ್ಟಿಯಾನಾ ಕೇರ್ ಆಸ್ಪತ್ರೆಯ ವೈದ್ಯರು ಸೋಮವಾರ ಮಧ್ಯಾಹ್ನ ಲಸಿಕೆಯ ಮೊದಲ ಪ್ರಮಾಣವನ್ನು ಬೈಡನ್ಗೆ ನೀಡಿದರು. ವೈದ್ಯರು ಬೈಡನ್ ಅವರ ಎಡಗೈಗೆ ಲಸಿಕೆ ನೀಡಿದರು.
ನನಗೆ ಲಸಿಕೆ ಸ್ವೀಕರಿಸಲು ಇಷ್ಟವಿಲ್ಲ. ಆದರೆ, ಅಮೆರಿಕ ಜನತೆಗೆ ಈ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಭರವಸೆ ಮೂಡಿಸುವ ಸಲುವಾಗಿ ನಾನೇ ಮೊದಲ ಕೊರೊನಾ ಲಸಿಕೆ ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಲಸಿಕೆಯ ಡೋಸ್ ಪಡೆದ ಜೋ ಬೈಡನ್
ಇಂದು ನಾನು ಕೋವಿಡ್-19 ಲಸಿಕೆ ಸ್ವೀಕರಿಸಿದೆ. ಕೋವಿಡ್ ನಿರ್ಮೂಲನೆಗಾಗಿ ಲಸಿಕೆ ಸಂಶೋಧನೆ ಮಾಡಿದ ವೈದ್ಯರಿಗೆ ಧನ್ಯವಾದ ಎಂದು ಈ ಬಗ್ಗೆ ಸ್ವತಃ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿದ್ದಾರೆ.