ಕರ್ನಾಟಕ

karnataka

ETV Bharat / international

ಭಾರತಕ್ಕೆ ಅಮೆರಿಕ ರಾಯಭಾರಿಯಾಗಿ ಲಾಸ್‌ ಏಂಜಲೀಸ್‌ ಮೇಯರ್‌ ನೇಮಕ? - America latest News

ತಮ್ಮ​ ಆಪ್ತರಲ್ಲೊಬ್ಬರಾದ ಮತ್ತು ಸದ್ಯ ಲಾಸ್ ಏಂಜಲೀಸ್ ಮೇಯರ್ ಆಗಿರುವ ಎರಿಕ್ ಗಾರ್ಸೆಟ್ಟಿಯನ್ನು ಭಾರತದ ನೂತನ ರಾಯಭಾರಿಯಾಗಿ ನೇಮಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಚಿಂತನೆ ನಡೆಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Eric Garcetti
ಎರಿಕ್ ಗಾರ್ಸೆಟ್ಟಿ

By

Published : May 5, 2021, 8:05 AM IST

ವಾಷಿಂಗ್ಟನ್ (ಯುಎಸ್): ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿಯನ್ನು ಭಾರತದ ಹೊಸ ರಾಯಭಾರಿಯಾಗಿ ನೇಮಿಸಲು ಜೋ ಬೈಡನ್ ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಎರಿಕ್​ ಅವರು ಮೊದಲಿನಿಂದಲೂ ಬೈಡನ್​ ಅವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಷ್ಟೇ ಅಲ್ಲದೆ, ಬೈಡನ್​ ಆಪ್ತರಲ್ಲಿ ಒಬ್ಬರಾಗಿದ್ದು, ಆಡಳಿತದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ.

ಎರಿಕ್​ ನೇಮಕ ಚಿಂತನೆಗೆ ಕಾರಣಗಳು ಹಲವು:

  • ಈ ಹಿಂದೆ ಕೊರೊನಾ ಸಂಕಷ್ಟವನ್ನು ಲಾಸ್​ ಏಂಜಲೀಸ್​ನಲ್ಲಿ ಉತ್ತಮವಾಗಿ ಇವರು ನಿಭಾಯಿಸಿದ್ದರು. ಅಂತೆಯೇ ಭಾರತಕ್ಕೆ ಅವರ ಸಲಹೆಗಳು ಅನುಕೂಲವಾಗಬಹುದು. ವೈದ್ಯಕೀಯ ಉಪಕರಣ ಪೂರೈಕೆಗೆ ಅವರ ಬೆಂಬಲ ಸಹಕಾರಿಯಾಗಹುದು.
  • ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಮಹತ್ವಾಕಾಂಕ್ಷೆಗಳನ್ನು ಎದುರಿಸಲು ಭಾರತವು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಭಾರತ-ಅಮೆರಿಕ ಸಂಬಂಧ ಸುಧಾರಣೆ ಮತ್ತು ದ್ವಿಪಕ್ಷೀಯ ಬೆಳವಣಿಗೆಗೆ ಸಹಕಾರಿಯಾಗಲಿದೆ.
  • 1.4 ಶತಕೋಟಿ ಜನರಿರುವ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರಜಾಪ್ರಭುತ್ವವಾಗಿದೆ. ಇಲ್ಲಿನ ಭವಿಷ್ಯದ ರಾಜಕೀಯ ಮತ್ತು ಆರ್ಥಿಕ ಪಾಲನ್ನು ಪಡೆಯುವ ಉದ್ದೇಶದಿಂದ ಎರಿಕ್​ರನ್ನು ಭಾರತದ ರಾಯಭಾರಿಯಾಗಿ ಸೂಚಿಸಲು ಚಿಂತನೆ ನಡೆಸಿರುವ ಸಾಧ್ಯತೆಗಳಿವೆ.

ಭಾರತದಲ್ಲಿ ಕೊರೊನಾ ಬಿಕ್ಕಟ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ABOUT THE AUTHOR

...view details