ವಾಷಿಂಗ್ಟನ್ :ಕ್ಯಾಲಿಫೋರ್ನಿಯಾ ಸೆನೆಟರ್ ಕಮಲಾ ಹ್ಯಾರಿಸ್ ಅವರು ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಅವರನ್ನು ಡೆಮಾಕ್ರಟಿಕ್ ಪಕ್ಷದ ಯುಎಸ್ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅನುಮೋದಿಸಿದ್ದಾರೆ.
ಈ ಕುರಿತು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಕಮಲಾ ಹ್ಯಾರಿಸ್, ಜೋ ಬಿಡೆನ್ರವರು ನಮ್ಮ ದೇಶಕ್ಕೆ ಗೌರವಯುತವಾಗಿ ಸೇವೆ ಸಲ್ಲಿಸಿದ್ದು, ಹಿಂದಿಗಿಂತಲೂ ಅವರ ಸೇವೆ ನಮಗೆ ಅಗತ್ಯವಿದೆ. ಹಾಗಾಗಿ ಅವರನ್ನು ಡೆಮಾಕ್ರಟಿಕ್ ಪಕ್ಷದ ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾಗಲು ನನ್ನ ಅಧಿಕಾರವಧಿಯಲ್ಲಿ ಎಲ್ಲ ರೀತಿಯ ಸಹಾಯವನ್ನು ಮಾಡುತ್ತೇನೆ. ನಮಗೆ ದೇಶದ ಜನರ ಬಗ್ಗೆ ಕಾಳಜಿ ವಹಿಸುವ ಹಾಗೂ ಜನರನ್ನು ಒಗ್ಗೂಡಿಸುವ ನಾಯಕ ಬೇಕು ಎಂದು ತಿಳಿಸಿದ್ದಾರೆ.
ಅಲ್ಲದೇ ನಾನು ಜೋ ಬಿಡೆನ್ ಪರವಾಗಿ ಸೋಮವಾರ ಡೆಟ್ರಾಯಿಟ್ನಲ್ಲಿ ಚುನಾವಣಾ ಪ್ರಚಾರ ಮಾಡುವುದಾಗಿ ಇದೇ ವೇಳೆ ತಿಳಿಸಿದರು. ಇನ್ನು ಕಮಲಾ ಹ್ಯಾರಿಸ್ ಅವರ ಬೆಂಬಲಕ್ಕೆ ಬಿಡೆನ್ ಧನ್ಯವಾದ ಅರ್ಪಿಸಿದ್ದು, ಕಮಲಾ ನಿಮ್ಮ ಇಡೀ ವೃತ್ತಿಜೀವನವನ್ನು ಜನರಿಗಾಗಿ ಹೋರಾಡಿದ್ದೀರಿ. ಈಗ ನಮ್ಮ ಬೆಂಬಲಕ್ಕೆ ನಿಂತಿರುವುದಾಕ್ಕಾಗಿ ನನ್ನ ಕುಟುಂಬದ ಕಡೆಯಿಂದ ಧನ್ಯವಾದಗಳು ಎಂದು ಟ್ವಿಟರ್ನಲ್ಲಿ ಬಿಡೆನ್ ಬರೆದುಕೊಂಡಿದ್ದಾರೆ.
77 ವರ್ಷದ ಬಿಡೆನ್ ನವೆಂಬರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸಲು ಡೆಮಾಕ್ರಟಿಕ್ ಫ್ರಂಟ್ ರನ್ನರ್ ಆಗಿದ್ದಾರೆ. ಚುನಾವಣೆ ನಡೆದ 14 ರಾಜ್ಯಗಳಲ್ಲಿ 10 ರಾಜ್ಯ ಗೆದ್ದು ಮುನ್ನಡೆ ಸಾಧಿಸಿದ್ದಾರೆ. ಇನ್ನು ಸೆನೆಟರ್ ಬರ್ನಿ ಸ್ಯಾಂಡರ್ಸ್ ನಂತರದ ಸ್ಥಾನದಲ್ಲಿದ್ದ ರನ್ನಪ್ ಅಪ್ ಆಗಿದ್ದಾರೆ.
ಸೆನೆಟರ್ ಆಮಿ ಕ್ಲೋಬುಚಾರ್, ಮಾಜಿ ಮೇಯರ್ ಪೀಟ್ ಬುಟ್ಟಿಗೀಗ್ ಮತ್ತು ಬಿಲಿಯನೇರ್ ಉದ್ಯಮಿ ಮೈಕೆಲ್ ಬ್ಲೂಮ್ಬರ್ಗ್ ಈ ಮೂರು ಅಭ್ಯರ್ಥಿಗಳು ಪಕ್ಷದ ಚುನಾವಣೆಗಳಲ್ಲಿ ಕಳಪೆ ಸಾಧನೆ ತೋರಿದ್ದು, ಬಿಡೆನ್ ಅವರನ್ನು ಅಧ್ಯಕ್ಷೀಯ ಸ್ಥಾನಕ್ಕಾಗಿ ಅನುಮೋದಿಸಿದ್ದಾರೆ.