ಲಂಡನ್: ಬ್ರಿಟನ್‌ನ ಸಂಸತ್ತಿನ ಸದಸ್ಯರು ಹೌಸ್ ಆಫ್ ಕಾಮನ್ಸ್‌ಗೆ ಆಗಮಿಸಿದ್ದು, ಈ ವೇಳೆ ಸ್ಪೀಕರ್ ಅವರ ಉಡುಪಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸ್ಪೀಕರ್ ಸರ್ ಲಿಂಡ್ಸೆ ಹೋಯ್ಲ್ ಅವರು ಸದಸ್ಯರಿಗೆ ಕೆಲವು ಹೊಸ ನೀತಿ ನಿಯಮಗಳನ್ನು ತಿಳಿಸಿದ್ದು, ಸಂಸದರಾದವರು ಹೇಗೆ ಇರಬೇಕು ಎಂದು ಸಲಹೆ ನೀಡಿದ್ದಾರೆ.
ನೂತನ ನಿಯಮದ ಪ್ರಕಾರ ಸಂಸದರು ತಮ್ಮ ಉಡುಗೆ ಬಗ್ಗೆ ಗಮನ ಹರಿಸಬೇಕು. ತಾವು ಯಾವ ವಸ್ತ್ರವನ್ನು ಧರಿಸುತ್ತಿದ್ದೇನೆ ಎಂಬ ಅರಿವು ಇರಬೇಕು. ಇದು ನಿಮಗೆ ಮತ ನೀಡಿದವರ ಮೇಲೆ ಗೌರವವನ್ನು ಪ್ರದರ್ಶಿಸುವಂತಿರಬೇಕು. ಹಾಗೆ ಸಂಸತ್ತು ಮತ್ತು ಸಂಸ್ಥೆಯನ್ನು ಗೌರವಿಸುವಂತಿರಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಹೊಸ ನಿಯಮಗಳನ್ನು ಓದಿ ಹೇಳಿರುವ ಅವರು, ಚೇಂಬರ್ ಮತ್ತು ಸುತ್ತಮುತ್ತಲಿನ ಸದಸ್ಯರು ಬ್ಯುಸಿನೆಸ್ ಅಟೈರ್( ಕೋಟ್,ಟೈ, ಜಾಕೆಟ್ ಉಡುಪು) ಧರಿಸಬೇಕು ಎಂದಿದ್ದಾರೆ. ಈ ನಿಯಮದ ಪ್ರಕಾರ, ಜೀನ್ಸ್, ಚಿನೋಸ್, ಕ್ರೀಡಾ ಉಡುಪು ಅಥವಾ ಯಾವುದೇ ಇತರ ಕ್ಯಾಶುವಲ್ ಪ್ಯಾಂಟ್ ಸೂಕ್ತವಲ್ಲ.
ಟೀ ಶರ್ಟ್ ಮತ್ತು ಸ್ಲೀವ್ ಲೆಸ್ ಟಾಪ್ ಗಳನ್ನು ಬ್ಯುಸಿನೆಸ್ ಅಟೈರ್ ಆಗಿ ಪರಿಗಣಿಸುವಿದಿಲ್ಲ. ಈ ಹಿನ್ನೆಲೆ ಸ್ಮಾರ್ಟ್/ಬ್ಯುಸಿನೆಸ್ ಶೂಗಳನ್ನು ಎಲ್ಲರೂ ಧರಿಸಬೇಕು. ಹಾಗೆ ಕ್ಯಾಶುವಲ್ ಶೂಗಳು ಸೂಕ್ತವಲ್ಲ. ಪುರುಷರು ಟೈ ಮತ್ತು ಜಾಕೆಟ್ ಗಳನ್ನು ಧರಿಸಬೇಕು ಎಂದು ನಿಯಮದಲ್ಲಿ ತಿಳಿಸಲಾಗಿದೆ.