ಕರ್ನಾಟಕ

karnataka

ETV Bharat / international

ಅಮೆರಿಕಾ ಆಯ್ತು, ಭಾರತದ ವಿರುದ್ಧ ಜಪಾನ್ ಕೋಪ!

ಮೊಬೈಲ್​ ಫೋನ್​, ಬೇಸ್ ಸ್ಟೇಷನ್​ ಮತ್ತು ರೂಟರ್ಸ್​, ಸರ್ಕ್ಯೂಟ್​ ಬೋರ್ಡ್​ ಸೇರಿದಂತೆ ಇತರೆ ಉತ್ಪನ್ನಗಳ ಮೇಲೆ ಹೆಚ್ಚುವರಿ ಭಾರತ ಆಮದು ಸುಂಕ ಹೇರುತ್ತಿದೆ ಎಂದು ಜಪಾನ್‌ ಆಪಾದಿಸಿದೆ.

ಸಾಂದರ್ಭಿಕ ಚಿತ್ರ

By

Published : May 14, 2019, 8:47 PM IST

Updated : May 14, 2019, 9:11 PM IST

ಜಿನೇವಾ/ನವದೆಹಲಿ: ತನ್ನಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತಿದೆ ಎಂದು ಆಪಾದಿಸಿ ವಿಶ್ವ ವಾಣಿಜ್ಯ ಸಂಸ್ಥೆಗೆ(WTO)ಗೆ ಜಪಾನ್ ದೂರು ನೀಡಿದೆ.

ಮೊಬೈಲ್​ ಫೋನ್​, ಬೇಸ್ ಸ್ಟೇಷನ್​ ಮತ್ತು ರೂಟರ್ಸ್​, ಸರ್ಕ್ಯೂಟ್​ ಬೋರ್ಡ್​ ಸೇರಿದಂತೆ ಇತರೆ ಉತ್ಪನ್ನಗಳ ಮೇಲೆ ಭಾರತ ಹೆಚ್ಚುವರಿ ಆಮದು ಸುಂಕ ಹೇರುತ್ತಿದೆ ಜಪಾನ್‌ ಆಪಾದಿಸಿದೆ.

'ಭಾರತ ಸುಂಕದ ರಾಜ್ಯ'ವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಅವರು ಪದೇ ಪದೇ ಜರೆಯುತ್ತಿರುತ್ತಾರೆ. ಟ್ರಂಪ್​ಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಜಪಾನ್​, ಕಾನೂನಿನ ಮೂಲಕ ಡಬ್ಲ್ಯುಟಿಒಗೆ ದೂರು ಕೊಟ್ಟಿದೆ.

ಸೀಮಾ ಸುಂಕ ಸೇರಿದಂತೆ ಕೆಲವು ವಿಧದ ತೆರಿಗೆಗಳನ್ನು ಹೆಚ್ಚಿಸಲಾಗಿದೆ. ದೇಶಿ ಉತ್ಪಾದನೆಯನ್ನು ಉತ್ತೇಜಿಸಲು ಈ ಕ್ರಮ ಅಗತ್ಯವಾಗಿತ್ತು ಎಂದು ಭಾರತ ಸ್ಪಷ್ಟನೆ ನೀಡಿದೆ. 2014ರ ಸೆಪ್ಟೆಂಬರ್​ನಲ್ಲಿ ಘೋಷಣೆಯಾದ 'ಮೇಕ್​ ಇನ್​ ಇಂಡಿಯಾ'ಗೆ ಅತ್ಯಧಿಕ ಪ್ರೋತ್ಸಾಹ ಒದಗಿಸಲು ಸುಂಕ ಏರಿಕೆ ಭಾರತಕ್ಕೆ ಅನಿವಾರ್ಯವಾಗಿದೆ.

Last Updated : May 14, 2019, 9:11 PM IST

For All Latest Updates

TAGGED:

ABOUT THE AUTHOR

...view details