ಕರ್ನಾಟಕ

karnataka

ETV Bharat / international

ಚುನಾವಣಾ ಅಭಿಯಾನಕ್ಕೆ 4 ಮಿಲಿಯನ್ ಡಾಲರ್​​ ಸಂಗ್ರಹಿಸಿದ ಇವಾಂಕಾ ಟ್ರಂಪ್ - ಮರುಚುನಾವಣಾ ಅಭಿಯಾನಕ್ಕೆ ನಿಧಿ ಸಂಗ್ರಹ

ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್, ತಂದೆ ಡೊನಾಲ್ಡ್​​ ಟ್ರಂಪ್​ ಮರು ಆಯ್ಕೆ ಅಭಿಯಾನಕ್ಕಾಗಿ 4 ಮಿಲಿಯನ್ ಯುಎಸ್​ ಡಾಲರ್ ಸಂಗ್ರಹಿಸಿದ್ದಾರೆ.

ivanka
ivanka

By

Published : Aug 6, 2020, 10:25 AM IST

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರ ಸಮರ ತಾರಕಕ್ಕೇರಿದೆ. ಇದೇ ನವೆಂಬರ್​ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಮಧ್ಯೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರು ಆಯ್ಕೆ ಅಭಿಯಾನಕ್ಕೆ ಪುತ್ರಿ ಇವಾಂಕಾ ಟ್ರಂಪ್ 4 ಮಿಲಿಯನ್ ಯುಎಸ್ ಡಾಲರ್​ಗಳನ್ನು ವರ್ಚುವಲ್ ಈವೆಂಟ್‌ ಮೂಲಕ ಸಂಗ್ರಹಿಸಿದ್ದಾರೆ.

ಸುಮಾರು 100 ಜನರು ಜೂಮ್‌ ಆ್ಯಪ್​ನಲ್ಲಿ ನಡೆದ ಅವರ ಮೊದಲ ವರ್ಚುವಲ್ ನಿಧಿಸಂಗ್ರಹ ಕಾರ್ಯದಲ್ಲಿ ಪಾಲ್ಗೊಂಡರು ಎಂದು ಮೂಲಗಳು ತಿಳಿಸಿವೆ.

ಇವಾಂಕಾ ಮುಂದಿನ ವಾರ ಮತ್ತೊಂದು ನಿಧಿಸಂಗ್ರಹ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವಾಂಕಾ 2016ರ ಚುನಾವಣೆಯಲ್ಲೂ ತಂದೆಯ ಪರ ಪ್ರಚಾರ ಮಾಡಿದ್ದರು.

ABOUT THE AUTHOR

...view details