ವಾಷಿಂಗ್ಟನ್: ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ವೈದ್ಯಕೀಯ ಉಪಕರಣಗಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ಅಮೆರಿಕ ಕಳುಹಿಸಿಕೊಡುತ್ತಿದೆ. ಈವರೆಗೆ ಅಮೆರಿಕದ ನಾಲ್ಕು ಮಿಲಿಟರಿ ವಿಮಾನಗಳು ಭಾರತಕ್ಕೆ ಬಂದಿಳಿದಿವೆ. ಈ ವೇಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ಪ್ರಯತ್ನಕ್ಕೆ ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ವೈದ್ಯಕೀಯ ಉಪಕರಣ ಪೂರೈಕೆ: ಸಿಬ್ಬಂದಿ ಶ್ರಮಕ್ಕೆ ಅಮೆರಿಕ ಮೆಚ್ಚುಗೆ - ಯುಎಸ್ ಸಂಬಂಧಿತ ಸುದ್ದಿ
ಭಾರತಕ್ಕೆ ಯುಎಸ್ನಿಂದ ವೈದ್ಯಕೀಯ ಉಪಕರಣಗಳನ್ನು ಪೂರೈಕೆ ಮಾಡುವಾಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ಪ್ರಯತ್ನಕ್ಕೆ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಇಲ್ಲಿಯವರೆಗೆ ನಾವು 4 ಮಿಲಿಟರಿ ವಿಮಾನಗಳನ್ನು ಭಾರತಕ್ಕೆ ಕಳುಹಿಸಿದ್ದೇವೆ. ಇದರಲ್ಲಿ 1ಎಂ ರಾಪಿಡ್ ಡಯಾಗ್ನೋಸ್ಟಿಕ್ ಟೆಸ್ಟ್, 545 ಆಕ್ಸಿಜನ್ ಸಾಂದ್ರಕಗಳು, 1,600,300 ಎನ್ 95 ಮಾಸ್ಕ್, 457 ಆಕ್ಸಿಜನ್ ಸಿಲಿಂಡರ್, 440 ರೆಗ್ಯುಲೇಟರ್, 220 ಪಲ್ಸ್ ಆಕ್ಸಿಮೀಟರ್ ಮತ್ತು 1 ಡಿಪ್ಲಾಯಬಲ್ ಆಕ್ಸ್ ಹೊಂದಿದೆ. ಇದನ್ನು ಸಾಗಾಟ ಮಾಡಲು ನಮ್ಮ ಸಿಬ್ಬಂದಿ ಶ್ರಮಪಟ್ಟಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
"ಯುಎಸ್ ಜೊತೆ ಸಹಕಾರ ಮುಂದುವರೆದಿದೆ. ಯುಎಸ್ಎಯಿಂದ ಮತ್ತೊಂದು ವಿಮಾನವು 1000 ಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್, ರೆಗ್ಯುಲೇಟರ್ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಹೊತ್ತು ಭಾರತಕ್ಕೆ ಆಗಮಿಸುತ್ತಿದೆ. ಇದು 2 ದಿನಗಳ ಅವಧಿಯಲ್ಲಿ ಆಮ್ಲಜನಕದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾವು ಯುಎಸ್ ಬೆಂಬಲ ನೀಡಿದಕ್ಕಾಗಿ ಕೃತಜ್ಞರಾಗಿರಬೇಕು" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.