ಜರೋಸಲೇಂ( ಇಸ್ರೇಲ್):ಸುತ್ತಲೂ ಶತ್ರುಗಳನ್ನೇ ಹೊಂದಿರುವ ಪುಟ್ಟ ರಾಷ್ಟ್ರವೊಂದು ತನ್ನ ರಕ್ಷಣಾ ವ್ಯವಸ್ಥೆಯನ್ನ ಮತ್ತಷ್ಟು ಅತ್ಯಾಧುನಿಕಗೊಳಿಸಿದೆ. ಅಂದ ಹಾಗೇ ಆ ರಾಷ್ಟ್ರ ಬೇರಾವುದು ಅಲ್ಲ ಇಸ್ರೇಲ್.
ಇರೋನ್ ಡೋಮ್ ರಕ್ಷಣಾ ವ್ಯವಸ್ಥೆ ಮೇಲ್ದರ್ಜೆಗೇರಿಸಿದ ಇಸ್ರೇಲ್.. ಇರಾನ್‌ಗೆ ನಡುಕ? - ಇರೋನ್ ಡ್ರೋಂ ರಕ್ಷಣಾ ವ್ಯವಸ್ಥೆ ಮೇಲ್ದರ್ಜೆಗೇರಿಸಿದ ಇಸ್ರೇಲ್
ಇರಾನ್-ಅಮೆರಿಕ ಯುದ್ಧದ ಕಾರ್ಮೋಡದ ಬೆನ್ನಲ್ಲೇ ಇಸ್ರೇಲ್ ಕ್ಷಿಪಣಿವೊಂದನ್ನ ಅತ್ಯಾಧುನಿಕರಣಗೊಳಿಸಿರುವುದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಕ್ಷಣಾ ಸಚಿವ, ಇದೊಂದು ಸಂಕೀರ್ಣ ಪರೀಕ್ಷಾ ಅಭಿಯಾನವಾಗಿತ್ತು. ಇದನ್ನ ನಮ್ಮ ರಕ್ಷಣಾ ನಿಪುಣರ ಟೀಂ ಸಂಪೂರ್ಣಗೊಳಿಸಿದೆ. ಇದು ಸಂಪೂರ್ಣ ಅತ್ಯಾಧುನಿಕ ಇರೋನ್ ಡೋಮ್ ರಕ್ಷಣಾ ವ್ಯವಸ್ಥೆಯಾಗಿದೆ. ಯೋಜನಾಬದ್ಧವಾಗಿ ಮೇಲ್ದೆರ್ಜೆಗೆ ಏರಿದೆ ಎಂದು ಮಾಹಿತಿ ನೀಡಿದ್ದಾರೆ. ಇಸ್ರೇಲ್ನ ಮಿಸೈಲ್ ಡಿಫೆನ್ಸ್ ಆರ್ಗನೈಜೇಷನ್ ಈ ಪರೀಕ್ಷಾರ್ಥ ಪ್ರಯೋಗ ಮಾಡಿದೆ.
ಇಸ್ರೇಲ್ ರಕ್ಷಣಾ ಮಂತ್ರಾಲಯ, ರಫೇಲ್ ಅಡ್ವಾನ್ಸ್ ಢಿಪೆನ್ಸ್ ಸಿಸ್ಟೆಮ್ ಲಿಮಿಟೆಡ್‌ಗಳ ಸಹಯೋಗದಲ್ಲಿ ಪರೀಕ್ಷೆ ನಡೆಯಿತು. ಇರಾನ್-ಅಮೆರಿಕ ಯುದ್ಧದ ಕಾರ್ಮೋಡದ ಬೆನ್ನಲ್ಲೇ ಇಸ್ರೇಲ್ ಈ ಕ್ಷಿಪಣಿಯನ್ನ ಅತ್ಯಾಧುನಿಕರಣಗೊಳಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಯಾವುದೇ ಸಂಭಾವ್ಯ ದಾಳಿ ತಡೆಗಟ್ಟಲು ಇಸ್ರೇಲ್ ಸನ್ನದ್ಧವಾಗಿದೆ ಎಂದು ಹೇಳಲಾಗುತ್ತಿದೆ.