ಟೆಹರಾನ್: ಬೇರೆ ದೇಶಗಳು ಪರಮಾಣು ಒಪ್ಪಂದವನ್ನು ಮರೆತು ಒಂದು ವೇಳೆ ಟೆಹರಾನ್ ಮೇಲೆ ದಾಳಿ ಮಾಡಲು ಮುಂದಾದ್ರೆ. ಈ ಸಂಬಂಧ ಅಂತಿಮವಾಗಿ ಮತ್ತು ಹೆಚ್ಚು ಪರಿಣಾಮಕಾರಿ ಹೆಜ್ಜೆಯನ್ನು ಇಡಬೇಕಾಗುತ್ತದೆ ಎಂದು ಇರಾನ್ ಹೇಳಿದೆ.
ಈ ಪ್ರವೃತ್ತಿ ಮುಂದುವರಿದ್ರೆ, ಇರಾನ್ ಪರಿಣಾಮಕಾರಿ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅಬ್ಬಾಸ್ ಮೌಸಾವಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮೇ. 2019 ರಿಂದ ಇರಾನ್ 2015 ರ ಒಪ್ಪಂದಕ್ಕೆ ತನ್ನ ಬದ್ಧತೆಯನ್ನು ಕ್ರಮೇಣ ಕಡಿಮೆಗೊಳಿಸುತ್ತಿದೆ, ಇದನ್ನು ಅಧಿಕೃತವಾಗಿ ಜಂಟಿ ಸಮಗ್ರ ಯೋಜನೆ (ಜೆಸಿಪಿಒಎ) ಎಂದು ಕರೆಯಲಾಗುತ್ತದೆ.
ಕಳೆದ ವರ್ಷ ಈ ಒಪ್ಪಂದದಿಂದ ಯುಎಸ್ ಹಿಂದೆ ಸರಿದಿದೆ. ಇರಾನಿನ ವಿರೋಧಿ ದೇಶಗಳಾದ ಯುಕೆ, ಫ್ರಾನ್ಸ್ ಮತ್ತು ಜರ್ಮನಿ ಕೂಡ ಈ ನಿಯಮವನ್ನು ಗಾಳಿಗೆ ತೂರಿವೆ. ಆದಾಗ್ಯೂ, ಜನವರಿ 5 ರಂದು, ಯುರೇನಿಯಂ ಪುಷ್ಟೀಕರಣ ಮತ್ತು ಯುರೇನಿಯಂ ಪ್ರಮಾಣ ಅಥವಾ ಸಂಶೋಧನೆ ಹಾಗೂ ಅದರ ಅಭಿವೃದ್ಧಿಗೆ ಸಂಬಂಧಿಸಿದಂತೆ ತನ್ನ ಪರಮಾಣು ಉದ್ಯಮದ ಮೇಲೆ ಯಾವುದೇ ಕಾರ್ಯಾಚರಣೆ ಮಾಡುವುದಿಲ್ಲ ಎಂದು ಈ ದೇಶಗಳು ಹೇಳಿವೆ.
ಬಾಗ್ದಾದ್‌ನಲ್ಲಿ ಇರಾನಿನ ಮೇಜರ್ ಜನರಲ್ ಖಾಸೆಮ್ ಸುಲೇಮಾನಿ ಅವರನ್ನು ಕೊಂದ ಎರಡು ದಿನಗಳ ನಂತರ ಅಮೆರಿಕ ಈ ನಿರ್ಧಾರಕ್ಕೆ ಬಂದಿದೆ. ಕೆಲವು ಯುರೋಪಿಯನ್ ರಾಜ್ಯಗಳು ನಮಗೆ ದ್ರೋಹ ಮಾಡಿದ್ರು, ಅವರೊಂದಿಗೆ ಮಾತುಕತೆ ನಡೆಸುವ ಬಾಗಿಲನ್ನು ಇನ್ನೂ ಮುಚ್ಚಿಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮೌಸಾವಿ ಹೇಳಿದ್ದಾರೆ.