ನ್ಯೂಯಾರ್ಕ್:ಜಾಗತಿಕ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಬೇಕೆಂದು ಕರೆ ನೀಡಿದ್ದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಭಾರತದ ಲಸಿಕೆ ಉತ್ಪಾದನಾ ಸಾಮರ್ಥ್ಯವು 'ವಿಶ್ವದ ಅತ್ಯುತ್ತಮ ಆಸ್ತಿ' ಎಂದು ಬಣ್ಣಿಸಿದ್ದಾರೆ.
"ಭಾರತದಲ್ಲಿ ಭಾರತೀಯ ಅಭಿವೃದ್ಧಿ ಹೊಂದಿದ ಲಸಿಕೆಗಳ ಉತ್ಪಾದನೆ ಬಹಳ ಉನ್ನತ ಮಟ್ಟದಲ್ಲಿದೆ. ಹೀಗಾಗಿ ನಾವು ಭಾರತೀಯ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಭಾರತವು ಎಲ್ಲ ಸಾಧನಗಳನ್ನು ಹೊಂದಿದ್ದು, ಜಾಗತಿಕ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸುವುದು ಅವಶ್ಯಕ. ಅಲ್ಲಿನ ಲಸಿಕೆ ಉತ್ಪಾದನಾ ಸಾಮರ್ಥ್ಯವು ಇಂದು ಜಗತ್ತು ಹೊಂದಿರುವ ಅತ್ಯುತ್ತಮ ಆಸ್ತಿಯಾಗಿದೆ. ಅದನ್ನು ಜಗತ್ತು ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಭಾರತವು ನೆರೆಯ ರಾಷ್ಟ್ರಗಳಿಗೆ 55 ಲಕ್ಷ ಡೋಸ್ ಕೊರೊನಾ ವೈರಸ್ ಲಸಿಕೆ ನೀಡಿದ ಹಿನ್ನೆಲೆ ಗುಟೆರೆಸ್ ಅವರಿಂದ ಮೆಚ್ಚುಗೆ ವ್ಯಕ್ತವಾಗಿದೆ.