ಕರ್ನಾಟಕ

karnataka

ETV Bharat / international

ಅಮೆರಿಕಾದ ಉನ್ನತ ಸಾರ್ವಜನಿಕ ಆರೋಗ್ಯ ತಜ್ಞರೊಂದಿಗೆ ಸಭೆ ನಡೆಸಿದ ಭಾರತದ ಯುಎಸ್ ರಾಯಭಾರಿ - ಕೋವಿಡ್-19 ಬಿಕ್ಕಟ್ಟು

ರಾಯಭಾರಿ ಸಂಧು ಅವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ, ಭಾರತದಲ್ಲಿನ ವೈರಸ್ ತಳಿಗಳು ಮತ್ತು ರೂಪಾಂತರಗಳು ಮತ್ತು ಇವುಗಳ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವದ ಕುರಿತು ಕೂಡ ಚರ್ಚೆ ನಡೆಸಲಾಯಿತು..

India's US envoy meets Dr Fauci, discusses COVID-19 crisis, new strains and variants

By

Published : May 5, 2021, 2:48 PM IST

ವಾಷಿಂಗ್ಟನ್ (ಯು.ಎಸ್​.ಎ) : ಅಮೆರಿಕಾದ ಭಾರತದ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರು ಅಮೆರಿಕಾದ ಉನ್ನತ ಸಾರ್ವಜನಿಕ ಆರೋಗ್ಯ ತಜ್ಞ ಡಾ. ಆಂಥೋನಿ ಫೌಸಿ ಅವರೊಂದಿಗೆ ವರ್ಚುವಲ್ ಸಭೆ ನಡೆಸಿ ಭಾರತದಲ್ಲಿ ಪ್ರಸ್ತುತ ಕೋವಿಡ್-19 ಬಿಕ್ಕಟ್ಟು, ಹೊಸ ತಳಿಗಳು ಮತ್ತು ವೈರಸ್‌ನ ರೂಪಾಂತರಗಳ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಚರ್ಚಿಸಿದರು.

ಸಾಂಕ್ರಾಮಿಕ ರೋಗದ ಕುರಿತು ಅಮೆರಿಕಾ ಅಧ್ಯಕ್ಷ ಜೋ ಬೈಡನ್​ರ ಉನ್ನತ ಸಲಹೆಗಾರರಾಗಿರುವ ಫೌಸಿಯೊಂದಿಗೆ ಭಾರತದ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಸಭೆ ನಡೆಸಿದ್ದು ಇದೇ ಮೊದಲಾಗಿದೆ. ಸಭೆಯಲ್ಲಿ ಫೌಸಿ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದೊಂದಿಗೆ ಇರುವುದಾಗಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ತಾರಂಜಿತ್ ಸಿಂಗ್ ಸಂಧು ಹಾಗೂ ಡಾ. ಆಂಥೋನಿ ಫೌಸಿ ಮಾತುಕತೆ

ರಾಯಭಾರಿ ಸಂಧು ಅವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ, ಭಾರತದಲ್ಲಿನ ವೈರಸ್ ತಳಿಗಳು ಮತ್ತು ರೂಪಾಂತರಗಳು ಮತ್ತು ಇವುಗಳ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವದ ಕುರಿತು ಕೂಡ ಚರ್ಚೆ ನಡೆಸಲಾಯಿತು.

ABOUT THE AUTHOR

...view details