ಟೊರೊಂಟೊ :23 ವರ್ಷದ ಭಾರತೀಯ ಮೂಲದ ಯುವಕನನ್ನು ಹತ್ಯೆ ಮಾಡಿರುವ ಘಟನೆ ಕೆನಡಾದ ಟ್ರುರೊ ನಗರದ ನೊವಾ ಸ್ಕೊಟಿಯಾ ಪ್ರಾಂತ್ಯದಲ್ಲಿ ನಡೆದಿದೆ. ಪ್ರಬ್‌ಜಿತ್ ಸಿಂಗ್ ಕತ್ರಿ ಮೃತ ದುರ್ದೈವಿ ಎಂದು ಮೂಲಗಳು ತಿಳಿಸಿವೆ. ಇದು ಜನಾಂಗೀಯ ಪ್ರೇರಿತ ದ್ವೇಷದ ಅಪರಾಧ ಎಂದು ಅಲ್ಲಿನ ಭಾರತೀಯ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ.
ಕಳೆದ ಭಾನುವಾರ ತಡರಾತ್ರಿ 2 ಗಂಟೆಗೆ ಕರೆ ಬಂತು. ಮೃತ ಯುವಕ ತಂದಿದ್ದ ಅಪಾರ್ಟ್ಮೆಂಟ್ ಸ್ಥಳಕ್ಕೆ ಭೇಟಿ ನೀಡಿದಾಗ ತೀವ್ರಗಾಯಗಳ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಲೇಟನ್ಸ್ ಟ್ಯಾಕ್ಸಿಯಲ್ಲಿ ಸಿಂಗ್ ಕೆಲಸ ಮಾಡುತ್ತಿದ್ದ ಎಂದು ಟ್ರುರೊ ಪೊಲೀಸ್ ಅಧಿಕಾರಿ ಡೇವಿಡ್ ಮ್ಯಾಕ್‌ನೈಲ್ ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.