ವಾಷಿಂಗ್ಟನ್( ಅಮೆರಿಕ):ಹೆಚ್1 ಬಿ ವೀಸಾ ನೀತಿಯಿಂದಾಗಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಾಗದ ಭಾರತೀಯರು ಈಗ ಕೆನಡಾದತ್ತ ತೆರಳುತ್ತಿದ್ದಾರೆ ಎಂದು ವಲಸೆ ಮತ್ತು ನೀತಿ ತಜ್ಞರು ತಿಳಿಸಿದ್ದಾರೆ
ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಅಥವಾ ಶಾಶ್ವತ ರೆಸಿಡೆನ್ಸಿ ನೀಡುವಲ್ಲಿ ಪ್ರತಿ ದೇಶ ಕೋಟಾ ಇರುವುದು ಇದಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ. ಭಾರತೀಯ ಪ್ರತಿಭೆಗಳು ಅಮೆರಿಕದಿಂದ ಕೆನಡಾಕ್ಕೆ ಹೋಗುವುದನ್ನು ತಡೆಯಲು ಅಮೆರಿಕ ಸಂಸತ್ತು (ಕಾಂಗ್ರೆಸ್), ಅಧ್ಯಕ್ಷರಿಗೆ ಒತ್ತಾಯಿಸಿದೆ.
ಮೂರು ಉದ್ಯೋಗ ಆಧಾರಿತ ವರ್ಗಗಳ ಒಟ್ಟು ಬ್ಯಾಕ್‌ಲಾಗ್ 2030ರ ಆರ್ಥಿಕ ವರ್ಷದಲ್ಲಿ ಅಂದಾಜು 9,15,497 ಭಾರತೀಯರಿಂದ ಅಂದಾಜು 21,95,795 ಭಾರತೀಯರಿಗೆ ಹೆಚ್ಚಾಗುತ್ತದೆ ಎಂದು ನ್ಯಾಷನಲ್ ಫೌಂಡೇಶನ್ ಫಾರ್ ಅಮೆರಿಕನ್ ಪಾಲಿಸಿ ಕಾರ್ಯನಿರ್ವಾಹಕ ನಿರ್ದೇಶಕ ಸ್ಟುವರ್ಟ್ ಆಂಡರ್ಸನ್ ಹೇಳಿದ್ದಾರೆ. ಒಂದು ದಶಕದೊಳಗೆ 20 ಲಕ್ಷಕ್ಕೂ ಹೆಚ್ಚು ಜನರ ಉದ್ಯೋಗ ಆಧಾರಿತ ಹಸಿರು ಕಾರ್ಡ್ಗಳಿಗಾಗಿ ಕಾಯುತ್ತಿದ್ದಾರೆ.