ಹ್ಯೂಸ್ಟನ್(ಅಮೆರಿಕ): ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕಾರ್ಯಾಚರಣೆಗಳಿಗೆ 10 ಮಂದಿ ಹೊಸ ಗಗನಯಾತ್ರಿಗಳನ್ನು ನಾಸಾ ಘೋಷಿಸಿದ್ದು, ಈ 10 ಮಂದಿಯಲ್ಲಿ ಭಾರತ ಮೂಲದ ಪ್ರತಿಭೆಯೊಬ್ಬರು ಆಯ್ಕೆಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ನಾಸಾದ ಭವಿಷ್ಯದ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನ ಮಾಡಲಾಗಿತ್ತು. ಸುಮಾರು 12 ಸಾವಿರಕ್ಕೂ ಹೆಚ್ಚು ಅರ್ಜಿಗಳು ನಾಸಾಗೆ ಬಂದಿದ್ದವು. ಇವುಗಳಲ್ಲಿ ಭಾರತೀಯ ಮೂಲದ ವ್ಯಕ್ತಿಯಾದ ಡಾ.ಅನಿಲ್ ಮೆನನ್ ಎಂಬುವವರು ಸೇರಿದಂತೆ 10 ಮಂದಿಯನ್ನು ನಾಸಾ ಆಯ್ಕೆ ಮಾಡಿದೆ.
ಈ ಗಗನಯಾತ್ರಿಗಳಿಗೆ ಎರಡು ವರ್ಷಗಳ ಆರಂಭಿಕ ಗಗನಯಾನ ತರಬೇತಿ ನೀಡಲಾಗುತ್ತದೆ. ಈ ತರಬೇತಿ ಜನವರಿ 2022ರಿಂದ ಆರಂಭವಾಗಲಿದ್ದು, ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಾಸಾದ ಚಂದ್ರಯಾನ ಯೋಜನೆಯಾದ ಆರ್ಟೆಮಿಸ್ ಮಿಷನ್ ಮತ್ತು ಇತರ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ನಿಯೋಜನೆ ಮಾಡಲಾಗುತ್ತದೆ ಎಂದು ನಾಸಾ ತನ್ನ ವರದಿಯಲ್ಲಿ ತಿಳಿಸಿದೆ.