ಮಾಸ್ಕೋ (ರಷ್ಯಾ):ರಷ್ಯಾದ ಭಾರತೀಯ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮಾ ಅವರು ಸೋಮವಾರ ಮಾಸ್ಕೋದಲ್ಲಿ ರಷ್ಯಾದ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಪತ್ರಕರ್ತರನ್ನು ಸ್ವಾಗತಿಸಿ, ಬಳಿಕ ನವದೆಹಲಿಯ 'ಲಸಿಕೆ ಮೈತ್ರಿ' ಉಪಕ್ರಮದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ರಾಯಭಾರಿ ವರ್ಮಾ ಅವರು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ ಮಾತನ್ನು ಇಲ್ಲಿ ಮತ್ತೊಮ್ಮೆ ಉಲ್ಲೇಖಿಸಿದರು. "ಭಾರತವು ಏನನ್ನು ಹೊಂದಿದೆ, ಅದನ್ನು ಹಂಚಿಕೊಳ್ಳುತ್ತದೆ. ಇಡೀ ಜಗತ್ತು ಒಂದು ಕುಟುಂಬವಿದ್ದಂತೆ" ಎಂದರು.
30 ಕ್ಕೂ ಹೆಚ್ಚು ರಷ್ಯಾದ ಪತ್ರಕರ್ತರು ಭಾರತ ತನ್ನ ನೆರೆಹೊರೆಯವರಿಗೆ ನೀಡುತ್ತಿರುವ ಲಸಿಕೆ ಸಹಾಯದ ಬಗ್ಗೆ ಆಸಕ್ತಿ ತೋರಿಸಿದರು. ಅಲ್ಲದೇ ಸುಮಾರು 90 ದೇಶಗಳಿಗೆ ಸಹಾಯ ಮಾಡಲು ಯೋಜಿಸಿದ್ದಾರೆ. "ಫಾರ್ಮಸಿ ಆಫ್ ದಿ ವರ್ಲ್ಡ್" ಪಾತ್ರದಲ್ಲಿ ಭಾರತದ ಪಾತ್ರವನ್ನು ಅವರು ಶ್ಲಾಘಿಸಿದರು.