ಕರ್ನಾಟಕ

karnataka

ETV Bharat / international

ಯುಎಸ್​ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ : ಭಾರತದಿಂದ ಖಂಡನೆ - ಮಹಾತ್ಮ ಗಾಂಧಿ ಪ್ರತಿಮೆ ವಿರೂಪಗೊಳಿಸಿದ ಖಲಿಸ್ತಾನಿ ಪ್ರತ್ಯೇಕವಾದಿಗಳು

ಪ್ರತಿಭಟನಾಕಾರರ ಈ ವರ್ತನೆಯನ್ನು ಭಾರತೀಯ ರಾಯಭಾರಿ ಅಧಿಕಾರಿಗಳು ಖಂಡಿಸಿದ್ದು, ಘಟನೆ ಕುರಿತು ಅಮೆರಿಕಾದ ಕಾನೂನು ಜಾರಿ ಏಜೆನ್ಸಿಯಲ್ಲಿ ದೂರು ದಾಖಲಿಸಲಾಗಿದೆ..

ಯುಎಸ್​ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪಗೊಳಿಸಿದ ಖಲಿಸ್ತಾನಿ ಪ್ರತ್ಯೇಕವಾದಿಗಳು
ಯುಎಸ್​ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪಗೊಳಿಸಿದ ಖಲಿಸ್ತಾನಿ ಪ್ರತ್ಯೇಕವಾದಿಗಳು

By

Published : Dec 13, 2020, 12:17 PM IST

ವಾಷಿಂಗ್ಟನ್ :ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹಿನ್ನೆಲೆ ಸಿಖ್ ಅಮೆರಿಕನ್ ಯುವಕರು ಆಯೋಜಿಸಿದ್ದ ಪ್ರತಿಭಟನೆ ವೇಳೆ ಖಲಿಸ್ತಾನಿ ಪ್ರತ್ಯೇಕತೆಯ ಸದಸ್ಯರು, ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ವಿರೂಪಗೊಳಿಸಿದ್ದಾರೆ.

ಇದನ್ನೂ ಓದಿ: ಕಂದಹಾರ್‌ನಲ್ಲಿ ತಾಲಿಬಾನ್‌ ಮೇಲೆ ವೈಮಾನಿಕ ದಾಳಿ ಮಾಡಿದ್ದು ನಿಜ; ಯುಎಸ್‌ ಸೇನೆ ಸ್ಪಷ್ಟನೆ

ರಾಯಭಾರ ಕಚೇರಿಯು ಅನ್ವಯವಾಗುವ ಕಾನೂನಿನಡಿ ಅಪರಾಧಿಗಳ ವಿರುದ್ಧ ತನಿಖೆ ಮಾಡಿ, ಕ್ರಮ ಕೈಗೊಳ್ಳಬೇಕು ಎಂದು ಯುಎಸ್ ಕಾನೂನು ಜಾರಿ ಸಂಸ್ಥೆಗಳನ್ನು ಒತ್ತಾಯಿಸಿದೆ ಎಂದು ಯುಎಸ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಖಲಿಸ್ತಾನಿ ಪ್ರತ್ಯೇಕತೆಯ ಸದಸ್ಯರು ಭಾರತ ವಿರೋಧಿ ಘೋಷಣೆ ಕೂಗಿದರು.

ಇದೇ ವೇಳೆ ಕಚೇರಿಯ ಮುಂಭಾಗದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆ ಬಳಿಗೆ ತೆರಳಿ, ಪೋಸ್ಟರ್ ಸುತ್ತಿ ವಿರೂಪಗೊಳಿಸಿದ್ದಾರೆ. ಪ್ರತಿಭಟನಾಕಾರರ ಈ ವರ್ತನೆಯನ್ನು ಭಾರತೀಯ ರಾಯಭಾರಿ ಅಧಿಕಾರಿಗಳು ಖಂಡಿಸಿದ್ದು, ಘಟನೆ ಕುರಿತು ಅಮೆರಿಕಾದ ಕಾನೂನು ಜಾರಿ ಏಜೆನ್ಸಿಯಲ್ಲಿ ದೂರು ದಾಖಲಿಸಲಾಗಿದೆ.

ಈ ಪ್ರತಿಭಟನೆಯು ವಿಶೇಷವಾಗಿ ಸರ್ಕಾರದ ವಿರುದ್ಧವಲ್ಲ. ಆದರೆ, ರೈತರ ಬೆಂಬಲಕ್ಕಾಗಿದೆ. ಇದು ಅಲ್ಲಿನ ಪ್ರಸ್ತುತ ಆಡಳಿತಕ್ಕೆ ವಿರುದ್ಧವಾಗಿದೆ. ಈ ಮಸೂದೆಯನ್ನು ನಮ್ಮ ಸಂಸ್ಕೃತಿಯ ನಿರ್ಮೂಲನೆ ಎಂದು ನಾವು ಭಾವಿಸುತ್ತೇವೆ ಎಂದು ಪ್ರತಿಭಟನೆಯ ಸಂಘಟಕರಲ್ಲಿ ಒಬ್ಬರಾದ ಮನ್ಸಿಮ್ರಾನ್ ಸಿಂಗ್ ಹೇಳಿದರು.

ಇದನ್ನೂ ಓದಿ:ಜೂಲಿಯನ್‌ ಅಸಾಂಜ್‌ ಇರುವ ಜೈಲಿನ ಸೇಲ್ ಅತ್ಯಂತ ಅಪಾಯಕಾರಿ; ಪತ್ನಿ ಸ್ಟೆಲ್ಲಾ ಮೊರೀಸ್

ನಾವು ರೈತರನ್ನು ಬೆಂಬಲಿಸುವ ಮತ್ತೊಂದು ಗುಂಪು. ಖಲಿಸ್ತಾನ್ ಎಲ್ಲಿಂದ ಬರುತ್ತದೆ? ಕಳೆದ 35 ವರ್ಷಗಳಲ್ಲಿ ಈ ಕ್ರಿಯಾಶೀಲತೆ ಬೆಳೆಯುತ್ತಿರುವುದನ್ನು ನೀವು ನೋಡಿದ್ದೀರಿ. ಭಾರತ ಏಕೆ ತನ್ನ ಸ್ವಂತ ಜನರಿಗೆ ಅಥವಾ ತನ್ನದೇ ಸರ್ಕಾರಕ್ಕೆ ಆ ಪ್ರಶ್ನೆ ಕೇಳುತ್ತಿಲ್ಲ. ಆದರೆ, ಅಮೆರಿಕಾದಲ್ಲಿ ಯಾರಾದರೂ ಪ್ರತ್ಯೇಕತೆಯ ಬಗ್ಗೆ ಮಾತನಾಡಿದ್ದಾರಾ, ಅವರನ್ನು ಏಕೆ ಕೇಳುತ್ತಾರೆ ಎಂದು ಮನ್ಸಿಮ್ರಾನ್ ಸಿಂಗ್ ಪ್ರಶ್ನಿಸಿದರು.

ABOUT THE AUTHOR

...view details