ವಾಷಿಂಗ್ಟನ್:ಭಾರತೀಯ-ಅಮೆರಿಕನ್ನರು ಆಡಳಿತದಲ್ಲಿ ಹೆಚ್ಚಿನ ಸ್ಥಾನ ಪಡೆಯುತ್ತಿದ್ದಾರೆ. ಈ ಮೂಲಕ ದೇಶವನ್ನು ಅವರು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಬೈಡನ್ ತಮ್ಮ ಭಾಷಣ ಬರಹಗಾರರಿಂದ ಹಿಡಿದು ನಾಸಾದವರೆಗೆ ಮತ್ತು ಸರ್ಕಾರದ ಪ್ರತಿಯೊಂದು ವಿಭಾಗದವರೆಗಿನ ಆಡಳಿತದ ಪ್ರಮುಖ ನಾಯಕತ್ವ ಸ್ಥಾನಗಳಿಗೆ ಕನಿಷ್ಠ 55 ಭಾರತೀಯ - ಅಮೆರಿಕನ್ನರನ್ನು ನೇಮಕ ಮಾಡಿದ್ದಾರೆ.
"ಭಾರತೀಯ ಮೂಲದ ಅಮೆರಿಕನ್ನರು ದೇಶವನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ. ಸ್ವಾತಿ ಮೋಹನ್, ನನ್ನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ನನ್ನ ಭಾಷಣ ಬರಹಗಾರ ವಿನಯ್ ರೆಡ್ಡಿ ಇವರೆಲ್ಲಾ ಭಾರತೀಯ ಮೂಲದವರು " ಎಂದು ನಾಡೆ ವಿಜ್ಞಾನಿಗಳೊಂದಿಗಿನ ವಾಸ್ತವಿಕ ಸಂವಾದದಲ್ಲಿ ಬೈಡನ್ ಹೇಳಿದರು. ಮಂಗಳ ಗ್ರಹದಲ್ಲಿ ರೋವರ್ ಯಶಸ್ವಿಯಾಗಿ ಇಳಿದುದರ ಹಿಂದೆ ಭಾರತೀಯ ಮೂಲದ ವಿಜ್ಞಾನಿ ಡಾ. ಸ್ವಾತಿ ಮೋಹನ್ ಪ್ರಮುಖ ಪಾತ್ರ ವಹಿಸಿದ್ದರು. ಈ ಸಂಬಂಧ ಮಾತನಾಡಿದ ಬೈಡನ್ ಹೇಳಿಕೆ ನೀಡಿದ್ದಾರೆ.