ವಾಷಿಂಗ್ಟನ್ (ಅಮೆರಿಕ) :ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಭಾರತೀಯ-ಅಮೆರಿಕನ್ ಗಣಿತಶಾಸ್ತ್ರಜ್ಞ ಪ್ರೊ.ನಿಖಿಲ್ ಶ್ರೀವಾಸ್ತವ ಅವರು ಅಮೆರಿಕನ್ ಮ್ಯಾಥಮೆಟಿಕಲ್ ಸೊಸೈಟಿ ನೀಡುವ 'ಸಿಪ್ರಿಯನ್ ಫೊಯಾಸ್ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
'1959-ಸಮಸ್ಯೆ' ಬಗೆಹರಿಸಿದಕ್ಕಾಗಿ ನಿಖಿಲ್ ಶ್ರೀವಾಸ್ತವ ಜೊತೆಗೆ ಆ್ಯಡಮ್ ಮಾರ್ಕಸ್ ಮತ್ತು ಡೇನಿಯಲ್ ಸ್ಪೀಲ್ಮನ್ ಕೂಡ ಪ್ರಶಸ್ತಿಯನ್ನು ಹಂಚಿಕೊಳ್ಳಲಿದ್ದಾರೆ.
ಆ್ಯಡಮ್ ಮಾರ್ಕಸ್ ಅವರು ಸ್ವಿಟ್ಜರ್ಲೆಂಡ್‌ನ ಉನ್ನತ ಶಿಕ್ಷಣ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಡೇನಿಯಲ್ ಸ್ಪೀಲ್ಮನ್ ಅವರು ಕಂಪ್ಯೂಟರ್ ಸೈನ್ಸ್ ಹಾಗೂ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ.
ಇದನ್ನೂ ಓದಿ: 13,500 ಅಡಿ ಎತ್ತರದಲ್ಲಿ ಗಾಳಿಯಲ್ಲೇ ಸ್ಕೈ ಸರ್ಫಿಂಗ್ ಡೈವ್ ಮಾಡಿ ವಿಶ್ವದಾಖಲೆ ಬರೆದ ವೀರ!