ವಾಷಿಂಗ್ಟನ್ (ಅಮೆರಿಕ): ಇಂಡೋ ಅಮೆರಿಕನ್ ಕಾನೂನು ತಜ್ಞ ನಿತಿನ್ ಶಾ ಅವರನ್ನ ಅಮೆರಿಕದ ಅಡ್ಮಿನಿಸ್ಟ್ರೇಟಿವ್ ಕಾನ್ಫರೆನ್ಸ್ನ ಕೌನ್ಸಿಲ್ ಆಗಿ ಅಧ್ಯಕ್ಷ ಜೋ ಬೈಡನ್ ನೇಮಿಸಿದ್ದಾರೆ. ಪ್ರಸ್ತುತ ಅವರು ಅಮೆರಿಕದ ಸಾಮಾನ್ಯ ಆಡಳಿತ ಸೇವೆಗಳ ಜನರಲ್ ಕೌನ್ಸಿಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಯುಎಸ್ಎನ ಪ್ರಮುಖ ಸ್ವತಂತ್ರ್ಯ ಸಂಸ್ಥೆಗೆ ನೇಮಕವಾಗಿದ್ದಾರೆ.
ಇವರು ಈ ಸಂಸ್ಥೆಯ ಮುಂದೆ ಬರುವ ಆಡಳಿತ ಸಮಸ್ಯೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ. ಜೊತೆಗೆ ಸಾಮಾನ್ಯ ಆಡಳಿತ ಸೇವೆ ನಿಯೋಜಿತ ಅಧಿಕಾರಿ ಮತ್ತು ಮಾಹಿತಿ ಕಾಯ್ದೆಯ ಅಧಿಕಾರಿಯಾಗಿರಲಿದ್ದಾರೆ. ಇವರಿಗೆ ದೇಶಾದ್ಯಂತ ಸುಮಾರು 170 ವಕೀಲರ ಮತ್ತು ಸಿಬ್ಬಂದಿ ಇರುವ ಕಚೇರಿಯನ್ನ ನಿರ್ವಹಿಸಬೇಕಾಗುತ್ತದೆ ಎಂದು ಶ್ವೇತಭವನ ತಿಳಿಸಿದೆ.