ಕರ್ನಾಟಕ

karnataka

ETV Bharat / international

ನಾಸಾದ ಗಗನಯಾತ್ರಿಗಳಲ್ಲಿ ಇಂಡೋ-ಅಮೆರಿಕನ್: ಚಂದ್ರ, ಮಂಗಳ ಮಿಷನ್​ನಲ್ಲಿ ಪ್ರಮುಖ ಪಾತ್ರ - ರಾಜಾ ಚಾರಿ ನಾಸಾ ಗಗನಯಾತ್ರಿ

ಹೈದರಾಬಾದ್​ ಮೂಲದ ರಾಜ ಜಾನ್ ವರ್ಪುತೂರ್ ಚಾರಿ ಎಂಬುವವರು ನಾಸಾ ದಿಂದ ಪದವಿ ಪಡೆದಿದ್ದು, ಮುಂಬರುವ ಮಹತ್ವಾಕಾಂಕ್ಷಿ ಯೋಜನೆಗಳ ಭಾಗವಾಗಲಿದ್ದಾರೆ

indian-american astronaut, ಇಂಡೋ ಅಮೆರಿಕನ್ ಗಗನಯಾತ್ರಿ
ರಾಜಾ ಚಾರಿ

By

Published : Jan 12, 2020, 8:34 PM IST

Updated : Jan 12, 2020, 9:05 PM IST

ಹೂಸ್ಟನ್(ಅಮೆರಿಕ):ಎರಡು ವರ್ಷಗಳ ಕಾಲ ಗಗನಯಾತ್ರಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ 11 ಜನರಿಗೆ ನಾಸಾ ಪದವಿ ನೀಡಿದ್ದು, ಅದರಲ್ಲಿ ಭಾರತೀಯ ಮೂಲದ ರಾಜ ಜಾನ್ ವರ್ಪುತೂರ್ ಚಾರಿ (Raja Jon Vurputoor Chari) ಕೂಡ ಒಬ್ಬರು.

2017ರಲ್ಲಿ ನಾಸಾ ತನ್ನ ಮುಂದಿನ ಪ್ರೋಗ್ರಾಮ್​ಗಾಗಿ ಅರ್ಜಿ ಕರೆದಿದ್ದು 18 ಸಾವಿರ ಅಭ್ಯರ್ಥಿಗಳು ನಾಸಾಗೆ ಅರ್ಜಿ ಸಲ್ಲಿಸಿದ್ದರು, ಇವರ ಪೈಕಿ ರಾಜಾ ಚಾರಿ ಕೂಡ ಒಬ್ಬರಾಗಿದ್ದಾರೆ. ಉನ್ನತ ಶಿಕ್ಷಣ ಪಡೆಯುವ ಗುರಿಯೊಂದಿಗೆ ಎಂಜಿನಿಯರಿಂಗ್ ಪದವಿಗಾಗಿ ಹೈದರಾಬಾದ್‌ನಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು.

41 ವರ್ಷದ ಚಾರಿ ಅವರನ್ನು 2017 ರ ಗಗನಯಾತ್ರಿ ಅಭ್ಯರ್ಥಿ ತರಗತಿಗೆ ಸೇರಲು ನಾಸಾ ಆಯ್ಕೆ ಮಾಡಿತ್ತು. ಆಗಸ್ಟ್ 2017ರಲ್ಲಿ ಕರ್ತವ್ಯಕ್ಕೆ ಸೇರಿಕೊಂಡಿದ್ದ ಅವರು ಆರಂಭಿಕ ಗಗನಯಾತ್ರಿ ಅಭ್ಯರ್ಥಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಈಗ ಮಿಷನ್ ನಿಯೋಜನೆಗೆ ಅರ್ಹರಾಗಿದ್ದಾರೆ.

ಅಮೆರಿಕ ವಾಯುಪಡೆಯ ಕರ್ನಲ್ ಆಗಿರುವ ಇವರು ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಾಸಾದಿಂದ ಪದವಿ ಸ್ವೀಕರಿಸಿದ್ದಾರೆ. ಗಗನಯಾತ್ರಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ್ದು, ಬಾಹ್ಯಾಕಾಶ ಕೇಂದ್ರ, ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಸಂಬಂಧಿಸಿದ ಮಹತ್ವಾಕಾಂಕ್ಷೆಯ ಕಾರ್ಯಾಚರಣೆಗಳ ಭಾಗವಾಗಲಿದ್ದಾರೆ.

Last Updated : Jan 12, 2020, 9:05 PM IST

ABOUT THE AUTHOR

...view details