ಕರ್ನಾಟಕ

karnataka

ETV Bharat / international

ಭಾರತ 'ಹಿಂದುತ್ವ ರಾಷ್ಟ್ರ'ದತ್ತ ಸಾಗುತ್ತಿದೆ: ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಹೇಳಿಕೆ

ವಿಶ್ವಸಂಸ್ಥೆಯ ಮಹಾಧಿವೇಶನದ (ಯುಎನ್‍ಜಿಎ) 75ನೇ ಸಾಮಾನ್ಯಸಭೆಯಲ್ಲಿ ಮಾತನಾಡಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತವು ಮಹಾತ್ಮ ಗಾಂಧಿಯವರ ಜಾತ್ಯತೀತತೆಯನ್ನು ಬಿಟ್ಟುಕೊಡುತ್ತಿದೆ. ಮತ್ತು ಅದು 'ಹಿಂದುತ್ವ' ರಾಷ್ಟ್ರದತ್ತ ಸಾಗುತ್ತಿದೆ ಎಂದರು.

Imran Khan
ಇಮ್ರಾನ್ ಖಾನ್

By

Published : Sep 26, 2020, 6:32 AM IST

Updated : Sep 26, 2020, 6:48 AM IST

ನ್ಯೂಯಾರ್ಕ್​​ (ವಿಶ್ವಸಂಸ್ಥೆ):ವಿಶ್ವಸಂಸ್ಥೆಯ ಮಹಾಧಿವೇಶನದ (ಯುಎನ್‍ಜಿಎ) 75ನೇ ಸಾಮಾನ್ಯಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಭಾಷಣದಲ್ಲಿ ಭಾರತದ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸುತ್ತಿದ್ದಂತೆ ಭಾರತೀಯ ಪ್ರತಿನಿಧಿ ಪ್ರತಿಭಟಿಸಿ ಅಲ್ಲಿಂದ ಹೊರನಡೆದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಕೇಂದ್ರೀಕರಿಸುವ ಮೂಲಕ ಖಾನ್, ಭಾರತದ ವಿರುದ್ಧ ತಮ್ಮ ಭಾಷಣ ಶುರು ಮಾಡುತ್ತಿದ್ದಂತೆ ಅದನ್ನು ವಿರೋಧಿಸಿ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಅವರು ಅಲ್ಲಿಂದ ಕೂಡಲೇ ಎದ್ದು ಹೊರಟುಹೋದರು.

ಕೋವಿಡ್ -19 ಮುನ್ನೆಚ್ಚರಿಕೆಗಳಿಂದ ಈ ವರ್ಷದ ವಾರ್ಷಿಕ ಸಭೆಯಲ್ಲಿ ಖಾನ್ ಅವರ ಪೂರ್ವ ನಿಯೋಜಿತ ಭಾಷಣವನ್ನು ಸಾಮಾನ್ಯ ಸಭೆಯ ಕೊಠಡಿಯಲ್ಲಿ ಪ್ರದರ್ಶಿಸಲಾಯಿತು. ನಿಗದಿಪಡಿಸಿದ 34 ನಿಮಿಷಗಳ ಭಾಷಣದಲ್ಲಿ 15ಕ್ಕೂ ಅಧಿಕ ನಿಮಿಷ ಭಾರತದ ಮೇಲಿನ ವಾಗ್ದಾಳಿಗೆ ಮೀಸಲಿಟ್ಟರು.

ಪಾಕಿಸ್ತಾನ ಮತ್ತು ಸರ್ಕಾರ ನ್ಯಾಯಸಮ್ಮತ ಹೋರಾಟದಲ್ಲಿ ಕಾಶ್ಮೀರಿ ಸಹೋದರ ಹಾಗೂ ಸಹೋದರಿಯರೊಂದಿಗೆ ನಿಂತು ಬೆಂಬಲಿಸಲು ಬದ್ಧವಾಗಿದೆ ಎಂದು ಖಾನ್ ಹೇಳಿದರು.

ಪಾಕಿಸ್ತಾನ ಪ್ರಾಯೋಜಿತ ಭಾರತದ ಮೇಲಿನ ದಾಳಿಯಲ್ಲಿ ಭಾಗಿ ಆಗಿರುವುದನ್ನು ನಿರಾಕರಿಸಿದ ಖಾನ್, ಭಾರತದ ಸುಳ್ಳು ಕಾರ್ಯಾಚರಣೆಯ ಬಗ್ಗೆ ನಾವು ವಿಶ್ವ ಸಮುದಾಯ ಮುಂದೆ ನಿರಂತರವಾಗಿ ತಿಳಿಸುತ್ತಾ ಬಂದಿದ್ದೇವೆ. ಭಾರತವು ಪರಮಾಣು ವಾತಾವರಣದಲ್ಲಿ ಪಾಕಿಸ್ತಾನದ ವಿರುದ್ಧ ಮುಂಚೂಣಿಯಲ್ಲಿ ಇರುವಂತಹ ಅಪಾಯಕಾರಿ ಆಟವಾಡುತ್ತಿದೆ ಎಂದು ಆರೋಪಿಸಿದರು.

ಧಾರ್ಮಿಕತೆಯ ಮೂಲಕ ಮತ್ತೊಂದು ಸುತ್ತಿನ ಭಾಷಣ ಆರಂಭಿಸಿದ ಖಾನ್, ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ತಾನು ಬದ್ಧತೆಯಿಂದ ಇರುವುದಾಗಿ ಘೋಷಿಸಿದ ಭಾರತವು ಜಾತ್ಯತೀತತೆಯಿಂದ ದೂರ ಸರಿಯುತ್ತಿದೆ ಎಂದು ದೂರಿದರು.

ಇಸ್ಲಾಮಿಕ್ ಗಣರಾಜ್ಯದ ಪ್ರಧಾನ ಮಂತ್ರಿಗಳು ಮುಸ್ಲಿಮೇತರರಿಗೆ ಮತ್ತು ಅಹ್ಮದಿಯಾ ಪಂಥದ ಮುಸ್ಲಿಮರಿಗೆ ಸಂಪೂರ್ಣ ಪೌರತ್ವ ಹಕ್ಕುಗಳನ್ನು ನಿರಾಕರಿಸಿದ್ದಾರೆ. ಭಾರತವು ಮಹಾತ್ಮ ಗಾಂಧಿಯವರ ಜಾತ್ಯತೀತತೆಯನ್ನು ಬಿಟ್ಟುಕೊಡುತ್ತಿದೆ. ಮತ್ತು ಅದು 'ಹಿಂದುತ್ವ' ರಾಷ್ಟ್ರದತ್ತ ಸಾಗುತ್ತಿದೆ ಎಂದರು.

ಇದುವರೆಗೆ ಕಾಶ್ಮೀರದ ವಿಷಯದಲ್ಲಿ ಇದುವರೆಗೂ ಟರ್ಕಿಯ ಬೆಂಬಲ ಪಡೆದಿದ್ದ ಖಾನ್​, ಇತರೆ ಮುಸ್ಲಿಂ ರಾಷ್ಟ್ರಗಳ ಸಹಕಾರ ಗಿಟ್ಟಿಸಿಕೊಳ್ಳಲು ಆರ್​ಎಸ್​ಎಸ್ ಅನ್ನು ನಾಜಿಸಂಗೆ ಹೋಲಿಸಿ, 'ಗಾಂಧಿ ಮತ್ತು ನೆಹರೂ ಅವರ ಜಾತ್ಯತೀತತೆಯನ್ನು ಹಿಂದುರಾಷ್ಟ್ರ ಸ್ಥಾಪಿಸುವ ಕನಸಿನೊಂದಿಗೆ ಬದಲಾಯಿಸಲಾಗಿದೆ' ಎಂದು ಆರೋಪಿಸಿದರು. ಆದರೆ, ಚೀನಾದಲ್ಲಿನ ಉಯಿಘರ್ ಅಲ್ಪಸಂಖ್ಯಾತರ ಕಿರುಕುಳ, ಬೀಜಿಂಗ್ ಮುಸ್ಲಿಂ ಅಲ್ಪಸಂಖ್ಯಾತರ ಬಂಧನದ ಬಗ್ಗೆ ಒಂದು ಮಾತೂ ಆಡಲಿಲ್ಲ.

ಭಾರತವು ಕಾಶ್ಮೀರದ ಜನದಟ್ಟಣೆಯನ್ನು ಬದಲಾಯಿಸುತ್ತಿದೆ. ಅದರ ಸಾಂಸ್ಕೃತಿಕ ಹೆಗ್ಗುರುತನ್ನು ನಿಗ್ರಹಿಸುತ್ತದೆ ಎಂದು ಅವರು ದೂರಿದರು.

Last Updated : Sep 26, 2020, 6:48 AM IST

ABOUT THE AUTHOR

...view details