ಕರ್ನಾಟಕ

karnataka

ETV Bharat / international

ಗ್ರಾಮೀಣ ಬಡತನ ನಿರ್ಮೂಲನೆಗಾಗಿ ವಿಶ್ವಸಂಸ್ಥೆಯ ನಿರ್ಣಯದ ಪರ ಮತ ​​ಚಲಾಯಿಸಿದ ಭಾರತ - UN resolution

ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಯ ಭಾಗವಾಗಿ ಗ್ರಾಮೀಣ ಭಾಗದ ಬಡತನವನ್ನು ನಿರ್ಮೂಲನೆ ಮಾಡುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ ನೀಡಲಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾರತದ ಮೊದಲ ಕಾರ್ಯದರ್ಶಿ ಸ್ನೇಹಾ ದುಬೆ ತಿಳಿಸಿದ್ದಾರೆ.

ಸ್ನೇಹಾ ದುಬೆ
ಸ್ನೇಹಾ ದುಬೆ

By

Published : Nov 23, 2021, 7:22 AM IST

ನ್ಯೂಯಾರ್ಕ್ (ಅಮೆರಿಕ): ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಯ ಭಾಗವಾಗಿ ಗ್ರಾಮೀಣ ಭಾಗದ ಬಡತನ ನಿರ್ಮೂಲನೆ ಮಾಡುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತವು ಸೋಮವಾರ ಮತ ಚಲಾಯಿಸಿದೆ (India votes for eradicate rural poverty).

ವಿಶ್ವಸಂಸ್ಥೆ, ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಯನ್ನು (2030 Agenda for Sustainable Development) ಜಾರಿಗೆ ತರಲಿದ್ದು, ಗ್ರಾಮೀಣ ಬಡತನ ನಿರ್ಮೂಲನೆ ಮಾಡುವ ನಿರ್ಣಯವನ್ನು ಅಂಗೀಕರಿಸಿದೆ. ನಿರ್ಣಯ ಅಂಗೀಕಾರದ ಬಳಿಕ ಮಾತನಾಡಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾರತದ ಮೊದಲ ಕಾರ್ಯದರ್ಶಿ ಸ್ನೇಹಾ ದುಬೆ (Sneha Dubey, India's First Secretary at UNGA), ಇದನ್ನು ಅನುಷ್ಠಾನಗೊಳಿಸಲು ನನ್ನ ನಿಯೋಗ ಮತ್ತು ನನ್ನ ದೇಶಕ್ಕೆ ಈ ವಿಷಯ ಬಹಳ ಮುಖ್ಯ ಮತ್ತು ನಿರ್ಣಾಯಕವಾಗಿದೆ. ಹಾಗಾಗಿ ಈ ನಿರ್ಣಯಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದರು.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಪಾಕ್​ ಬೆವರು ಇಳಿಸಿದ ಸ್ನೇಹಾ ದುಬೆ.. IFS ಅಧಿಕಾರಿ ಮಾಹಿತಿಗೆ ಎಲ್ಲರೂ ಫಿದಾ!

ಭಾರತದಲ್ಲಿ, ವೇಗವರ್ಧಿತ ಆರ್ಥಿಕ ಬೆಳವಣಿಗೆ ಮತ್ತು ವಿಶಾಲ ಸಾಮಾಜಿಕ ಸುರಕ್ಷತಾ ಜಾಲಗಳ ಮೂಲಕ ಬಡತನ ನಿರ್ಮೂಲನೆ ಮಾಡಲು ನಾವು ಸಮಗ್ರ ಅಭಿವೃದ್ಧಿ ಕಾರ್ಯತಂತ್ರ ಅನುಷ್ಠಾನಗೊಳಿಸುತ್ತಿದ್ದೇವೆ. ಕಳೆದ ದಶಕದಲ್ಲಿ ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿದ್ದೇವೆ. ಕೊವಿಡ್​-19 ಸಾಂಕ್ರಾಮಿಕದ ಸಮಯದಲ್ಲಿ, ನಾವು ಬಡ ಜನರ ಪರ ಕ್ರಮ ಕೈಗೊಂಡಿದ್ದೇವೆ ಎಂದು ಸ್ನೇಹಾ ದುಬೆ ತಿಳಿಸಿದರು.

ಈ ಹಿಂದೆ ಸ್ನೇಹಾ ದುಬೆ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (United Nations General Assembly) ಜಮ್ಮು - ಕಾಶ್ಮೀರದ ವಿಷಯ ಪ್ರಸ್ತಾಪ ಮಾಡಿದ್ದ ಪಾಕ್​ ಪ್ರಧಾನಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿ ಭಾರತೀಯರ ಗಮನ ಸೆಳೆದಿದ್ದರು.

ABOUT THE AUTHOR

...view details