ವಾಷಿಂಗ್ಟನ್ : ಭಾರತ-ಅಮೆರಿಕ ಸಂಬಂಧ ಭದ್ರವಾದುದು. ಈ ರೀತಿಯ ಪ್ರವಾಸ ಎರಡೂ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ಅಮೆರಿಕದ ಉನ್ನತ ರಾಜತಾಂತ್ರಿಕ ಆಲಿಸ್ ವೆಲ್ಸ್ ಹೇಳಿದ್ದಾರೆ.
ಟ್ರಂಪ್ ಭಾರತ ಪ್ರವಾಸ : ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತೆ ಅಂದರು ಅಲಿಸ್ ವೆಲ್ಸ್! - ವಾಷಿಂಗ್ಟನ್: ಭಾರತ-ಅಮೆರಿಕ ಸಂಬಂಧ ಭದ್ರವಾದವು, ಈ ರೀತಿಯ ಪ್ರವಾಸ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಲಿದೆಯೆಂದು ಅಮೆರಿಕದ ಉನ್ನತ ರಾಜತಾಂತ್ರಿಕ ಆಲಿಸ್ ವೆಲ್ಸ್ ಹೇಳಿದ್ದಾರೆ. ದೇಶಗಳ ನಡುವಿನ ಸಂಬಂಧ
ಭಾರತ-ಅಮೆರಿಕ ಸಂಬಂಧ ದಿನೇದಿನೆ ಮತ್ತಷ್ಟು ಗಟ್ಟಿಯಾಗುತ್ತಿದೆ ಎಂದು ಅಮೆರಿಕ ತಿಳಿಸಿದೆ.
ಈ ದೇಶಗಳ ನಡುವಿನ ಸಂಬಂಧ ಉತ್ತಮ ಶಾಂತಿಯುತ ವಾತಾವರಣಕ್ಕೆ ಪೂರಕ. ಭಾರತಕ್ಕೆ ಟ್ರಂಪ್ ಭೇಟಿಯಿಂದ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಭದ್ರಗೊಳಿಸಲಿದೆ ಎಂದರು. ಅಮೆರಿಕ ಮತ್ತು ಭಾರತ ಈ ದೇಶೀಯ ಸಂಬಂಧವನ್ನು ಖುಷಿಯಿಂದ ಉತ್ತಮ ರೀತಿ ಕೊಂಡೊಯ್ಯುತ್ತಿವೆ. ದಿನೇದಿನೆ ಬಾಂಧವ್ಯ ಗಟ್ಟಿಯಾಗುತ್ತಿದೆ. ಉದಾಹರಣೆಗೆ ಕಳೆದ ವರ್ಷಕ್ಕಿಂತ ಈ ಬಾರಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದು ನಮ್ಮ ದೇಶದ ಕೊಡುಕೊಳ್ಳುವಿಕೆ ಮತ್ತು ಉತ್ತಮ ಸಂಬಂಧದ ಕುರಿತು ಹೇಳುತ್ತದೆ ಎಂದು ತಿಳಿಸಿದರು.
ಭಾರತ ಹಲವಾರು ವಿಷಯಗಳಲ್ಲಿ ಇಡೀ ಪ್ರಪಂಚದಲ್ಲಿ ಹೆಸರುವಾಸಿ. ಭಾರತ ಪ್ರವಾಸದೆಡೆಗೆ ಅಮೆರಿಕ ಗಮನ ಹರಿಸಿದೆ. ಭಾರತದ ಪ್ರಧಾನಿ ಮೋದಿ ಆಮಂತ್ರಣದ ಮೇರೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ತಮ್ಮ ಪತ್ನಿಯೊಂದಿಗೆ ಫೆ.24ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದರು.