ವಾಷಿಂಗ್ಟನ್: ವಿನಾಶಕಾರಿ ಶಸ್ತ್ರಾಸ್ತ್ರಗಳ ಹರಡುವಿಕೆ ಹಾಗೂ ಉಗ್ರವಾದಿಗಳಿಗೆ ಶಸ್ತ್ರಾಸ್ತ್ರ ಪೂರೈಕೆ ತಡೆಯುವ ಒಪ್ಪಂದಕ್ಕೆ ಭಾರತ ಹಾಗೂ ಅಮೆರಿಕ ಬದ್ಧವಾಗಿವೆ ಎಂದು ಉಭಯ ರಾಷ್ಟ್ರಗಳು ಮತ್ತೆ ದೃಢಪಡಿಸಿವೆ.
ಅಮೆರಿಕದಲ್ಲಿ ನಡೆದ ಭಾರತ-ಅಮೆರಿಕ ಭದ್ರತೆ ಕುರಿತ 9ನೇ ಸುತ್ತಿನ ಮಾತುಕತೆಯಲ್ಲಿ ಭಾರತದ ವಿದೇಶಾಂಗ ಇಲಾಖೆ ವಕ್ತಾರ ವಿಜಯ್ ಗೋಖಲೆ ಹಾಗೂ ಅಮೆರಿಕಾದ ಶಸ್ತ್ರಾಸ್ತ್ರ ನಿಯಂತ್ರಣ ಹಾಗೂ ಅಂತಾರಾಷ್ಟ್ರೀಯ ಭದ್ರತೆಯ ರಾಜ್ಯ ಕಾರ್ಯದರ್ಶಿ ಆಂಡ್ರಿಯಾ ಥಾಪ್ಸನ್ ಈ ಬಗ್ಗೆ ಮಾತುಕತೆ ನಡೆಸಿದರು.