ವಾಷಿಂಗ್ಟನ್ (ಯುಎಸ್):ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಪಾಕಿಸ್ತಾನದ ಪ್ರಚೋದನೆಗಳಿಗೆ ಮಿಲಿಟರಿ ಬಲದಿಂದ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚು ಎಂದು ಅಮೆರಿಕದ ಗುಪ್ತಚರ ಸಂಸ್ಥೆ ವರದಿಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ (ಒಡಿಎನ್‌ಐ) ಯುಎಸ್ ಕಾಂಗ್ರೆಸ್‌ಗೆ ನೀಡಿದ ವಾರ್ಷಿಕ ಬೆದರಿಕೆ ಮೌಲ್ಯಮಾಪನ ವರದಿಯಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಾಮಾನ್ಯ ಯುದ್ಧವು ಅಸಂಭವವಾಗಿದ್ದರೂ, ಇವೆರಡರ ನಡುವಿನ ಬಿಕ್ಕಟ್ಟುಗಳು ಹೆಚ್ಚು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.
ಇದನ್ನೂ ಓದಿ:ಪರಮಾಣು ವಿಧ್ವಂಸಕ ಕ್ರಮಗಳು ಮಾತುಕತೆಗೆ ಅಸ್ತ್ರವಲ್ಲ: ಅಮೆರಿಕಕ್ಕೆ ಇರಾನ್ ಎಚ್ಚರಿಕೆ