ಕರ್ನಾಟಕ

karnataka

ETV Bharat / international

2021ರ ಆಗಸ್ಟ್​​ನಲ್ಲಿ ಭಾರತವೇ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಅಧ್ಯಕ್ಷ..! - ತಾತ್ಕಾಲಿಕ ಸದಸ್ಯ ರಾಷ್ಟ್ರ

2021-22ರ ಎರಡು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ (ತಾತ್ಕಾಲಿಕ) ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುವ ಭಾರತ, 2021 ರ ಆಗಸ್ಟ್ ತಿಂಗಳಲ್ಲಿ 15 ರಾಷ್ಟ್ರಗಳ ಅಂಗಸಂಸ್ಥೆಯ ನೇತೃತ್ವ ವಹಿಸಲಿದೆ ಎಂದು ಯುಎನ್​ ವಕ್ತಾರರ ಕಚೇರಿ ತಿಳಿಸಿದೆ.

UN
ವಿಶ್ವಸಂಸ್ಥೆ

By

Published : Jun 19, 2020, 12:02 PM IST

ನ್ಯೂಯಾರ್ಕ್​: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಅಲ್ಲದ (ತಾತ್ಕಾಲಿಕ) ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿರುವ ಭಾರತ, 2021 ರ ಆಗಸ್ಟ್ ತಿಂಗಳಲ್ಲಿ 15 ರಾಷ್ಟ್ರಗಳ ಅಂಗಸಂಸ್ಥೆಯ ನೇತೃತ್ವ ವಹಿಸಲಿದೆ.

ಇಂಗ್ಲಿಷ್ ವರ್ಣಮಾಲೆಯ ಅನುಸಾರವಾಗಿ ಪ್ರತಿ ಸದಸ್ಯ ರಾಷ್ಟ್ರಗಳು ಒಂದು ತಿಂಗಳ ಕಾಲ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಪಡೆದು ಕಾರ್ಯ ನಿರ್ವಹಿಸುತ್ತವೆ. ವಿಶ್ವಸಂಸ್ಥೆ ವಕ್ತಾರರ ಕಚೇರಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭಾರತದ ಸರದಿಯು ಮುಂದಿನ ವರ್ಷ ಆಗಸ್ಟ್ ತಿಂಗಳಿನಲ್ಲಿ ಬರಲಿದ್ದು, ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ. ಅಲ್ಲದೇ 2022 ರಲ್ಲಿ ಕೂಡ ಮತ್ತೊಮ್ಮೆ ಒಂದು ತಿಂಗಳ ಕಾಲ ಈ ಅವಕಾಶ ದೊರೆಯಲಿದೆ.

ಭಾರತ, ನಾರ್ವೆ, ಐರ್ಲೆಂಡ್, ಮೆಕ್ಸಿಕೊ ಮತ್ತು ಕೀನ್ಯಾ ದೇಶಗಳು ಯುಎನ್‌ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯ ರಾಷ್ಟ್ರಗಳಾಗಿ ಬುಧವಾರ ಆಯ್ಕೆಯಾಗಿವೆ. ಚುನಾವಣೆಯಲ್ಲಿ193 ಸದಸ್ಯ ರಾಷ್ಟ್ರಗಳು ಭಾಗಿಯಾಗಿದ್ದವು. ಭಾರತವು 184 ಮತಗಳನ್ನು ಪಡೆದು, 2021-22ರ ಎರಡು ವರ್ಷಗಳ ಅವಧಿಗೆ ಸ್ಥಾನ ಪಡೆದಿದೆ. ಈ ಮೂಲಕ ಭಾರತವು 7ನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವವನ್ನು ಪಡೆದುಕೊಂಡಂತಾಗಿದೆ.

2021ರ ಜನವರಿಯಲ್ಲಿ ಟುನೀಶಿಯಾ ಅಧ್ಯಕ್ಷ ಸ್ಥಾನ ವಹಿಸಲಿದ್ದು, ಬಳಿಕ ಯುಕೆ (ರಷ್ಯಾ), ಯುಎಸ್ (ಅಮೆರಿಕಾ), ವಿಯೆಟ್ನಾಂ, ಚೀನಾ, ಎಸ್ಟೋನಿಯಾ, ಫ್ರಾನ್ಸ್, ಭಾರತ, ಐರ್ಲೆಂಡ್, ಕೀನ್ಯಾ, ಮೆಕ್ಸಿಕೊ ಮತ್ತು ನೈಜರ್ ದೇಶಗಳು ತಲಾ ಒಂದೊಂದು ತಿಂಗಳ ಕಾಲ ಭದ್ರತಾ ಮಂಡಳಿಯನ್ನು ನಡೆಸಲಿವೆ.

ABOUT THE AUTHOR

...view details