ಕರ್ನಾಟಕ

karnataka

ETV Bharat / international

ಕೋವಿಡ್ ಸೋಂಕಿತರ ಸಾವಿನ ಬಗ್ಗೆ ಭಾರತ, ಚೀನಾ, ರಷ್ಯಾ ನಿಖರ ಮಾಹಿತಿ ನೀಡುತ್ತಿಲ್ಲ: ಟ್ರಂಪ್

ಕೋವಿಡ್ -19 ನಿಂದ ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಚೀನಾ, ರಷ್ಯಾ, ಭಾರತ ನಿಖರವಾದ ಮಾಹಿತಿ ನೀಡುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

US President Donald Trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

By

Published : Sep 30, 2020, 1:34 PM IST

ವಾಷಿಂಗ್ಟನ್: ಕೋವಿಡ್-19 ಸಾವುಗಳ ಬಗ್ಗೆ ಭಾರತ, ಚೀನಾ ಮತ್ತು ರಷ್ಯಾದ ಸಂಖ್ಯೆಗಳ ವಿಶ್ವಾಸಾರ್ಹತೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ.

ಅಮೆರಿಕ ಚುನಾವಣಾ ಪೂರ್ವ ಚರ್ಚೆಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾದ ವೇಳೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಕೊರೊನಾ ಸೋಂಕಿನಿಂದ ಅಮೆರಿಕದಲ್ಲಿ ಹೆಚ್ಚು ಸಾವುಗಳು ದಾಖಲಾಗಿವೆ ಎಂದು ಟ್ರಂಪ್ ಆಡಳಿತದ ವಿರುದ್ಧ ಕಿಡಿಕಾರಿದ್ರು.

ಟ್ರಂಪ್- ಜೋ ಬಿಡೆನ್ ಚರ್ಚೆ

ಇದಕ್ಕೆ ಉತ್ತರಿಸಿದ ಡೊನಾಲ್ಡ್ ಟ್ರಂಪ್ 'ಚೀನಾ, ರಷ್ಯಾ, ಭಾರತದಲ್ಲಿ ಕೋವಿಡ್ -19 ನಿಂದ ಎಷ್ಟು ಜನರು ಮೃತಪಟ್ಟಿದ್ದಾರೆ ಎಂಬುದರ ಖಚಿತ ಮಾಹಿತಿ ನಮಗೆ ತಿಳಿದಿಲ್ಲ. ಏಕೆಂದರೆ ಅವರು ನೈಜ ಉತ್ತರ ನೀಡುವುದಿಲ್ಲ, ಅವರು ನೈಜ ಸಂಖ್ಯೆಗಳನ್ನು ನೀಡುವುದಿಲ್ಲ' ಎಂದು ಟ್ರಂಪ್ ಆರೋಪಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದ ಕಾರಣ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿರಬಹುದು ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ಅಧ್ಯಕ್ಷರು ಈ ವಿಚಾರದಲ್ಲಿ ಮೂರ್ಖರು ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಹಿತದೃಷ್ಟಿಯಿಂದ ಮಾಸ್ಕ್​ಗಳ ಬಗ್ಗೆ ಮಾತ್ರ ಚಿಂತೆ ಮಾಡುತ್ತಿದ್ದಾರೆ ಮತ್ತು ಇತರರ ಆರೋಗ್ಯದ ಚಿಂತೆ ಇಲ್ಲ ಎಂದು ಬಿಡೆನ್ ಹೇಳಿದ್ದಾರೆ.

ABOUT THE AUTHOR

...view details