ವಾಷಿಂಗ್ಟನ್(ಅಮೆರಿಕ):ಮಿಲಿಟರಿ ವಿಚಾರದಲ್ಲಿ ರಷ್ಯಾದ ಮೇಲಿನ ಅವಲಂಬನೆ ತಗ್ಗಿಸಲು ಗಮನಾರ್ಹವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಕುರಿತಂತೆ ಭಾರತ ಜವಾಬ್ದಾರಿಯುತ ಸ್ಥಾನದಲ್ಲಿದೆ ಎಂದು ಅಮೆರಿಕದ ಸೆನೆಟರ್ ಜಾನ್ ಕಾರ್ನಿನ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಸಿಎಎಟಿಎಸ್ಎ (CAATSA) ಕಾಯ್ದೆ ಪ್ರಯೋಗಿಸಬಾರದು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನು ಒತ್ತಾಯಿಸಿದ ನಂತರ ಮಾತನಾಡಿರುವ ಅವರು ಅಮೆರಿಕ ಮತ್ತು ಭಾರತ ಎರಡೂ ದೇಶಗಳಲ್ಲಿ ಆರ್ಥಿಕ ಸಹಕಾರದಂತೆಯೇ, ಮಿಲಿಟರಿ ಮತ್ತು ಭದ್ರತಾ ಸಹಕಾರವೂ ಇದೆ. 2016ರಲ್ಲಿ ಭಾರತವನ್ನು ಅಮೆರಿಕ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಘೋಷಿಸಿದೆ. ರಕ್ಷಣಾ ಪಾಲುದಾರಿಕೆಯನ್ನು ಹೆಚ್ಚಿಸಲು ಎರಡೂ ರಾಷ್ಟ್ರಗಳು ಯತ್ನಿಸುತ್ತಿವೆ ಎಂದು ಜಾನ್ ಕಾರ್ನಿನ್ ಹೇಳಿದ್ದಾರೆ.
ಯುಎಸ್- ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ಸಹಯೋಗದಲ್ಲಿ ನಡೆದ ಯುಎಸ್- ಇಂಡಿಯಾ ಫ್ರೆಂಡ್‌ಶಿಪ್ ಕೌನ್ಸಿಲ್ ಆಯೋಜಿಸಿದ Today's Geo-Political Landscape ಸಂವಾದ ಕಾರ್ಯಕ್ರಮದಲ್ಲಿ ಜಾನ್ ಕಾರ್ನಿನ್ ಭಾರತದ ಪರವಾಗಿ ಮಾತನಾಡಿದ್ದಾರೆ.
ರಷ್ಯಾದ ಮಿಲಿಟರಿ ಉಪಕರಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತವು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಯುನೈಟೆಡ್ ಸ್ಟೇಟ್ಸ್‌ನಿಂದ ಉಪಕರಣಗಳನ್ನು ಖರೀದಿಸಲು ಆಸಕ್ತಿಯನ್ನು ತೋರಿಸಿದೆ ಮತ್ತು ನಮ್ಮೊಂದಿಗೆ ಹೆಚ್ಚು ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಾನು ಭಾವಿಸುತ್ತೇವೆ.
ಭಾರತದ ಮೇಲೆ ಈ ವಿಚಾರದಲ್ಲಿ ನಿರ್ಬಂಧ ವಿಧಿಸುವುದನ್ನು ಅಮೆರಿಕ ಬಿಡಬೇಕು ಎಂದು ಜಾನ್ ಕಾರ್ನಿನ್ ಮತ್ತು ಮತ್ತೊಬ್ಬ ಸೆನೆಟರ್ ಮಾರ್ಕ್ ವಾರ್ನರ್ ಅವರು ಜೋ ಬೈಡನ್ ಅವರನ್ನು ಒತ್ತಾಯಿಸಿದ್ದರು. ಇದಾದ ಮರುದಿನವೇ ಜಾನ್ ಕಾರ್ನಿನ್ ಮತ್ತೊಮ್ಮೆ ಭಾರತ ಪರ ಬ್ಯಾಟಿಂಗ್ ಮಾಡಿದ್ದು, ಸಿಎಎಟಿಎ ಕಾಯ್ದೆಯಿಂದ ಭಾರತವನ್ನು ಹೊರಗಿಡುವುದೂ ಕೂಡಾ ಅಮೆರಿಕದ ಹಿತಾಸಕ್ತಿಯೇ ಆಗಿದೆ ಎಂದು ಪ್ರತಿಪಾದಿಸಿದ್ದಾರೆ.