ಕರ್ನಾಟಕ

karnataka

ETV Bharat / international

ಚೀನಾ ಅಮೆರಿಕಾಗೆ 10 ಟ್ರಿಲಿಯನ್ ಡಾಲರ್ ಪರಿಹಾರ ನೀಡಬೇಕು: ಟ್ರಂಪ್​ - ಭಾರತದ ಬಗ್ಗೆಟ್ರಂಪ್ ಮಾತು

ಜಾಗತಿಕವಾಗಿ ಕೊರೊನಾ ವೈರಸ್ ಸಾಕಷ್ಟು ಹಾನಿ ಸೃಷ್ಟಿಸಿದ್ದು, ಅಮೆರಿಕಾಗೆ ಚೀನಾ 10 ಟ್ರಿಲಿಯನ್ ಡಾಲರ್ ಪರಿಹಾರ ನೀಡಬೇಕೆಂದು ಟ್ರಂಪ್ ಹೇಳಿದ್ದಾರೆ.

India has just been devastated by COVID-19: Trump
ಚೀನಾ ಅಮೆರಿಕಕ್ಕೆ 10 ಟ್ರಿಲಿಯನ್ ಡಾಲರ್ ನೀಡಬೇಕು : ಟ್ರಂಪ್​

By

Published : Jun 18, 2021, 7:08 AM IST

ವಾಷಿಂಗ್ಟನ್, ಅಮೆರಿಕಾ:ಕೊರೊನಾ ಸಾಂಕ್ರಾಮಿಕದಿಂದಾಗಿ ಭಾರತ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ಚೀನಾ ಇದರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕೆಂದು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇದರ ಜೊತೆಗೆ ಚೀನಾ ಸುಮಾರು 10 ಟ್ರಿಲಿಯನ್ ಡಾಲರ್​ ಹಣವನ್ನು ಕೊರೊನಾದಿಂದ ಅಮೆರಿಕಾಗೆ ಆದ ನಷ್ಟದ ಹಿನ್ನೆಲೆ ತುಂಬಿಕೊಡಬೇಕೆಂದು ಆಗ್ರಹಿಸಿದ್ದಾರೆ.

ಫಾಕ್ಸ್ ನ್ಯೂಸ್​ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಜಗತ್ತಿಗೆ ಚೀನಾ ಸಾಕಷ್ಟು ಪರಿಹಾರ ಕೊಡಬೇಕಿದೆ. ಆದರೆ ಅದರ ಸಾಮರ್ಥ್ಯವಿದ್ದಷ್ಟು ಪರಿಹಾರ ನೀಡಲಿ ಎಂದು ಹೇಳಿದ್ದಾರೆ.

ಚೀನಾ ಮಾಡಿದ ಕೆಲಸದಿಂದ ಎಲ್ಲಾ ರಾಷ್ಟ್ರಗಳು ಸಂಕಷ್ಟಕ್ಕೆ ಈಡಾಗಿವೆ. ಆಕಸ್ಮಿಕವೋ, ಅಲ್ಲವೋ ಎಂಬ ವಿಚಾರ ಬದಿಗಿಡೋಣ. ಅದು ಆಕಸ್ಮಿಕವೇ ಆಗಿರಲಿ ಎಂದು ನಾನು ಬಯಸುತ್ತೇನೆ . ಚೀನಾದ ನಿರ್ಲಕ್ಷ್ಯದ ಮೂಲಕವೂ ಈ ಘಟನೆ ಜರುಗಿರಬಹುದು ಎಂದು ಪ್ರಶ್ನೆಯೊಂದಕ್ಕೆ ಟ್ರಂಪ್ ಉತ್ತರಿಸಿದ್ದಾರೆ.

ಇದನ್ನೂ ಓದಿ:ಇಂದಿನಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​... ಮೈದಾನದಲ್ಲಿ ಮಳೆರಾಯನ ಆಟವೇ ಹೆಚ್ಚು!

ಕೊರೊನಾದಿಂದ ಚೇತರಿಸಿಕೊಳ್ಳಲಾಗದ ಪರಿಸ್ಥಿತಿಗೆ ಹಲವು ರಾಷ್ಟ್ರಗಳು ತಲುಪಿವೆ ಎಂದಿರುವ ಟ್ರಂಪ್, ಭಾರತವನ್ನು ಉಲ್ಲೇಖಿಸುತ್ತಾ, ಕೊರೊನಾದಿಂದಾಗಿ ಭಾರತದ ಆರೋಗ್ಯ ವ್ಯವಸ್ಥೆ ಕುಸಿದಿದೆ. ಅಮೆರಿಕಾಗೂ ಕೊರೊನಾ ಭಾರಿ ಹೊಡೆತ ನೀಡಿದೆ ಎಂದಿದ್ದಾರೆ.

ಎಲ್ಲಾ ರಾಷ್ಟ್ರಗಳಿಗೆ ಚೀನಾ ಸಹಕಾರ ನೀಡಬೇಕು. ಅಮೆರಿಕಾ ಮತ್ತು ಚೀನಾದ ಆರ್ಥಿಕತೆ ಆದಷ್ಟು ಬೇಗ ಹಳಿಗೆ ಮರಳಬೇಕು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ABOUT THE AUTHOR

...view details