ಕರ್ನಾಟಕ

karnataka

ETV Bharat / international

ಕೋವಿಡ್-19 ಮಧ್ಯೆಯೂ ಸೌರ ಹರಾಜಿನಲ್ಲಿ ಭಾರತ ಉತ್ತಮ ಉದಾಹರಣೆ

ಕೋವಿಡ್-19 ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆಯಾಗಿ ಟ್ರಿಲಿಯನ್​ಗಟ್ಟಲೆ ಡಾಲರ್ ತೆರಿಗೆದಾರರ ಹಣವನ್ನು ಚೇತರಿಕೆ ಕಾರ್ಯಗಳಿಗೆ ಸೇರಿಸುವುದರಿಂದ ರಾಷ್ಟ್ರಗಳು ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ..

un
un

By

Published : Jul 10, 2020, 2:39 PM IST

ನ್ಯೂಯಾರ್ಕ್ :ವಿಶ್ವವು ಕೋವಿಡ್-19ನಿಂದ ಚೇತರಿಕೆಗೊಳ್ಳಲು ಯೋಜನೆಗಳನ್ನು ವಿನ್ಯಾಸಗೊಳಿಸುವಲ್ಲಿ ಕಾರ್ಯಗತಗೊಂಡಿದೆ. ಹೀಗಾಗಿ ಭವಿಷ್ಯದಲ್ಲಿಹೆಚ್ಚು ಸುಸ್ಥಿರ ಹೂಡಿಕೆ ಮಾಡುವ ಆಯ್ಕೆಯನ್ನು ಹೊಂದಿದೆ ಎಂದು ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

ಭಾರತದ ಪ್ರಕರಣವನ್ನು ಉಲ್ಲೇಖಿಸಿದ ಅವರು, ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯ ಕ್ಲೀನ್ ಎನರ್ಜಿ ಟ್ರಾನ್ಸಿಶನ್ ಶೃಂಗಸಭೆಯಲ್ಲಿ ಸಾಂಕ್ರಾಮಿಕ ರೋಗದ ಮಧ್ಯೆಯೂ ಸೌರ ಹರಾಜು ಜನಪ್ರಿಯತೆಯನ್ನು ಕಂಡಿದೆ ಎಂದು ಹೇಳಿದರು.

"ಕೋವಿಡ್-19 ಸಾಂಕ್ರಾಮಿಕಕ್ಕೆ ಪ್ರತಿಕ್ರಿಯೆಯಾಗಿ ಟ್ರಿಲಿಯನ್​ಗಟ್ಟಲೆ ಡಾಲರ್ ತೆರಿಗೆದಾರರ ಹಣವನ್ನು ಚೇತರಿಕೆ ಕಾರ್ಯಗಳಿಗೆ ಸೇರಿಸುವುದರಿಂದ ರಾಷ್ಟ್ರಗಳು ದೂರದೃಷ್ಟಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ" ಎಂದು ಅವರು ಹೇಳಿದರು.

ABOUT THE AUTHOR

...view details