ಕರ್ನಾಟಕ

karnataka

ETV Bharat / international

ಹವಾಮಾನ ಸಂರಕ್ಷಣೆ ಯೋಜನೆಗಳಿಗಾಗಿ CARICOM ರಾಷ್ಟ್ರಗಳಿಗೆ ಸಾಲದ ಮೊತ್ತ ವಿಸ್ತರಿಸಿದ ಭಾರತ - Modi in USA

ನ್ಯೂಯಾರ್ಕ್​ನಲ್ಲಿ ನಡೆದ CARICOM ನಾಯಕರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹವಾಮಾನ ಸಂರಕ್ಷಣೆ ಯೋಜನೆಗಳಿಗಾಗಿ CARICOM ರಾಷ್ಟ್ರಗಳಿಗೆ​ ಸಾಲವಾಗಿ ಭಾರತದಿಂದ ನೀಡುವ ಅನುದಾನವನ್ನು 150 ಮಿಲಿಯನ್​ ಡಾಲರ್​ಗೆ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.

CARICOM ರಾಷ್ಟ್ರಗಳಿಗೆ ಭಾರತದಿಂದ ಸಾಲದ ವಿಸ್ತರಣೆ

By

Published : Sep 26, 2019, 5:50 AM IST

ನ್ಯೂಯಾರ್ಕ್(ಯುಎಸ್​ಎ):ಹವಾಮಾನ ಸಂರಕ್ಷಣೆ ಯೋಜನೆಗಳಿಗಾಗಿ CARICOM ರಾಷ್ಟ್ರಗಳಿಗೆ​ ಸಾಲವಾಗಿ ಭಾರತದಿಂದ ನೀಡುವ ಅನುದಾನವನ್ನು 150 ಮಿಲಿಯನ್​ ಡಾಲರ್​ಗೆ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಇಲ್ಲಿ ನಡೆದ ಭಾರತ ಹಾಗೂ CARICOM ನಾಯಕರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೆರೆಬಿಯನ್​ ರಾಷ್ಟ್ರಗಳ ಸಮುದಾಯ ಅಭಿವೃದ್ಧಿ ಯೋಜನೆಗಳಿಗಾಗಿ 14 ಮಿಲಿಯನ್​ ಡಾಲರ್​ ಅನುದಾನವನ್ನು ಸಹ ಘೋಷಣೆ ಮಾಡಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಹೊರತಾಗಿ ನಡೆದ ಸಭೆಯಲ್ಲಿ 14 CARICOM ರಾಷ್ಟ್ರಗಳ ನಾಯಕರು ಭಾಗಿಯಾಗಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಸೆಂಟ್​ ಲೂಸಿಯಾದ ಪ್ರಧಾನಿ ಹಾಗೂ CARICOMನ ಹಾಲಿ ಅಧ್ಯಕ್ಷ ಅಲ್ಲೆನ್​ ಚಾಸ್ಟೆನೆಟ್​ ಕೂಡಾ ಭಾಗಿಯಾಗಿದ್ದರು.

ರಾಜಕೀಯ ಹಾಗೂ ಸಾಂಸ್ಥಿಕ ಮಾತುಕತೆ ಪ್ರಕ್ರಿಯೆಗಳನ್ನು ಬಲಪಡಿಸುವುದು, ಆರ್ಥಿಕ ಸಹಕಾರದ ವೃದ್ಧಿ, ವ್ಯಾಪಾರ ಹಾಗೂ ಹೂಡಿಕೆ ಹೆಚ್ಚಿಸುವುದು, ಭಾರತ ಹಾಗೂ CARICOM ರಾಷ್ಟ್ರಗಳ ಜನರ ಸಂಬಂಧ ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶದೊಂದಿಗೆ ಈ ಸಭೆ ನಡೆಸಲಾಗಿದೆ.

ABOUT THE AUTHOR

...view details