ಕರ್ನಾಟಕ

karnataka

ETV Bharat / international

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸ್ಥಾನಕ್ಕೆ ಭಾರತ ಯೋಗ್ಯವಲ್ಲ: ಮತ್ತೆ ಪಾಕ್​ ಆಕ್ಷೇಪ!

ಯುಎನ್‌ನಲ್ಲಿ ಪಾಕಿಸ್ತಾನದ ಪ್ರತಿನಿಧಿ ರಾಯಭಾರಿ ಮುನೀರ್ ಅಕ್ರಮ್, ಯುಎನ್‌ಎಸ್‌ಸಿಯಲ್ಲಿ ನೂತನ ಖಾಯಂ ಸದಸ್ಯರನ್ನು ಸೇರಿಸುವ ಬಗ್ಗೆ ಇಸ್ಲಾಮಾಬಾದ್‌ನ ಕಳವಳ ತೋರಿದೆ. ದಕ್ಷಿಣ ಏಷ್ಯಾದ ದೇಶ (ಭಾರತ) ಸ್ವಾತಂತ್ರ್ಯದ ನಂತರ 20 ಯುದ್ಧಗಳನ್ನು ನಡೆಸಿತ್ತು. ಭಯೋತ್ಪಾದನೆ ಮತ್ತು ಅಸ್ಥಿರತೆ ಈ ಪ್ರದೇಶದಾದ್ಯಂತ, ವಿಶೇಷವಾಗಿ ಪಾಕಿಸ್ತಾನದ ವಿರುದ್ಧ ಹುಟ್ಟುಹಾಕಿದೆ ಎಂದು ಅವರು ಆರೋಪಿಸಿದರು.

UNSC
ಯುಎನ್​ಎಸ್​​ಸಿ

By

Published : Nov 18, 2020, 4:23 PM IST

ನ್ಯೂಯಾರ್ಕ್​: ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್​ಎಸ್​​ಸಿ) ತಾತ್ಕಾಲಿಕ ಸದ್ಯಸವಾಗಿರುವ ಭಾರತ, 15 ಸದಸ್ಯರ ಶಾಶ್ವತ ಸದಸ್ಯತ್ವ ಪಡೆಯುವ ಭಾರತದ ಅರ್ಹತೆಯ ಬಗ್ಗೆ ಪಾಕಿಸ್ತಾನ ಮತ್ತೊಮ್ಮೆ ಆಕ್ಷೇಪ ವ್ಯಕ್ತಪಡಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಅಶಾಂತಿ ಹಾಗೂ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಯಮಗಳ ಉಲ್ಲಂಘನೆಯಿಂದಾಗಿ ನವ ದೆಹಲಿ ಈ ಸ್ಥಾನಕ್ಕೆ ಅರ್ಹತೆ ಪಡೆಯುವುದಿಲ್ಲ ಪಾಕಿಸ್ತಾನ ವಾದಿಸಿದೆ.

ಯುಎನ್‌ನಲ್ಲಿ ಪಾಕಿಸ್ತಾನದ ಪ್ರತಿನಿಧಿ ರಾಯಭಾರಿ ಮುನೀರ್ ಅಕ್ರಮ್, ಯುಎನ್‌ಎಸ್‌ಸಿಯಲ್ಲಿ ನೂತನ ಖಾಯಂ ಸದಸ್ಯರನ್ನು ಸೇರಿಸುವ ಬಗ್ಗೆ ಇಸ್ಲಾಮಾಬಾದ್‌ನ ಕಳವಳ ತೋರಿ, ದಕ್ಷಿಣ ಏಷ್ಯಾದ ದೇಶ (ಭಾರತ) ಸ್ವಾತಂತ್ರ್ಯದ ನಂತರ 20 ಯುದ್ಧಗಳನ್ನು ನಡೆಸಿತ್ತು. ಭಯೋತ್ಪಾದನೆ ಮತ್ತು ಅಸ್ಥಿರತೆ ಈ ಪ್ರದೇಶದಾದ್ಯಂತ, ವಿಶೇಷವಾಗಿ ಪಾಕಿಸ್ತಾನದ ವಿರುದ್ಧ ಹುಟ್ಟುಹಾಕಿದೆ ಎಂದು ಆರೋಪಿಸಿದರು.

ಈ ರಾಷ್ಟ್ರ ಪ್ರಾಯೋಜಿತ ಭಯೋತ್ಪಾದನೆಗೆ ನಮ್ಮಲ್ಲಿ ಸ್ಪಷ್ಟ ಮತ್ತು ಸಾಕಷ್ಟು ಪುರಾವೆಗಳಿವೆ ಎಂದು ಒಣ ಹೇಳಿಕೆ ನೀಡಿದರು. ವಿಶ್ವ ಸಂಸ್ಥೆಯ ಆಶ್ರಯದಲ್ಲಿ ಮುಕ್ತ ಮತ್ತು ನ್ಯಾಯಯುತ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ರಾಜ್ಯದ ಜನರ ಸ್ವನಿರ್ಣಯ ನಡೆಸುವ ಮೂಲಕ ವಿವಾದಿತ ಜಮ್ಮು ಮತ್ತು ಕಾಶ್ಮೀರದ ರಾಜ್ಯವನ್ನು ಅಂತಿಮವಾಗಿ ಹಸ್ತಾಂತರ ಮಾಡುವ ಯುಎನ್ ಭದ್ರತಾ ಮಂಡಳಿಯ ನಿರ್ಣಯಗಳನ್ನು ಭಾರತ ಉಲ್ಲಂಘಿಸಿದೆ ಎಂದು ದೂರಿದರು.

ಭದ್ರತಾ ಮಂಡಳಿಯ ಸುಧಾರಣೆ ಮತ್ತು ಪಾರದರ್ಶಕ ಚರ್ಚೆಯ ಸಂದರ್ಭದಲ್ಲಿ ರಾಯಭಾರಿ ಅಕ್ರಮ್ 193 ಸದಸ್ಯರ ಸಭೆಯೊಂದಿಗೆ ಮಾತನಾಡಲು ಸಿಕ್ಕ ಅವಕಾಶವನ್ನು ಬಳಸಿಕೊಂಡರು, ಕಾಶ್ಮೀರಿ ಜನರ ನ್ಯಾಯಸಮ್ಮತ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಭಾರತವು 9,00,000 ಸೈನಿಕರನ್ನು ನಿಯೋಜಿಸಿದೆ. ಭಾರಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ದೂರಿದರು.

ಭದ್ರತಾ ಮಂಡಳಿಯ ಸದಸ್ಯತ್ವಕ್ಕೆ ಭಾರತ ಅರ್ಹತೆ ಹೊಂದಿಲ್ಲ ಎಂದು ಪ್ರತಿಪಾದಿಸಿದರು. ಇತ್ತೀಚೆಗಷ್ಟೇ ಭಾರತದ ರಾಯಭಾರಿ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾವನ್ನ ತರಾಟೆಗೆ ತೆಗೆದುಕೊಂಡಿದ್ದರು, ಪಾಕ್​ ರಾಯಭಾರಿ ಮಾತ್ರ ತಮ್ಮ ಹಳೆಯ ಚಾಳಿಯನ್ನು ಬಿಟ್ಟಿಲ್ಲ. ಸಿಕ್ಕ ಅವಕಾಶವನ್ನ ಸದುಪಯೋಗ ಮಾಡಿಕೊಳ್ಳುವ ಹುನ್ನಾರವನ್ನ ನಡೆಸುತ್ತಲೇ ಇರುತ್ತದೆ. ಇದಕ್ಕೆ ಭಾರತದ ವಿಶ್ವಸಂಸ್ಥೆಯಲ್ಲಿನ ರಾಯಭಾರಿಗಳು ತಕ್ಕ ಪ್ರತ್ಯುತ್ತರವನ್ನ ನೀಡುತ್ತಲೇ ಇದ್ದಾರೆ.

ABOUT THE AUTHOR

...view details