ವಾಷಿಂಗ್ಟನ್(ಯುಎಸ್):ಚೀನಾ ಸೋಲಿಸಿ ಭಾರತ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ(ECOSOC) ಸದಸ್ಯನಾಗಿ ಹೊರಹೊಮ್ಮಿದೆ.
ಇದಕ್ಕೆ ಸಂಬಂಧಿಸಿದಂತೆ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್ ತಿರುಮೂರ್ತಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಭಾರತವು ಪ್ರತಿಷ್ಠಿತ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ ಸದಸ್ಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಇದೀಗ ಸಿಎಸ್ಡಬ್ಲ್ಯೂ ಸದಸ್ಯನಾಗಿ ಆಯ್ಕೆಯಾಗಿದೆ. ಇದು ನಮ್ಮೆಲ್ಲರ ಪ್ರಯತ್ನಕ್ಕೆ ಸಿಕ್ಕಿರುವ ಪ್ರಯತ್ನ ಎಂದಿದ್ದಾರೆ.