ಕರ್ನಾಟಕ

karnataka

ರಾನ್ಸಮ್‌ವೇರ್ ಎದುರಿಸಲು ಬೈಡನ್ ಆಡಳಿತ ಸಜ್ಜು.. ಆನ್​​​​ಲೈನ್​ ವಂಚನೆ ತಡೆಗೆ ಭಾರತದ್ದೂ ಇರಲಿದೆ ಬಹುದೊಡ್ಡ ಪಾತ್ರ

By

Published : Oct 13, 2021, 5:36 PM IST

ರಾನ್ಸಮ್‌ವೇರ್ ಎದುರಿಸಲು ಬೈಡನ್ ಆಡಳಿತವು ಆಯೋಜಿಸಿದ ಅಂತಾರಾಷ್ಟ್ರೀಯ ಸಭೆಯಲ್ಲಿ ನಿರ್ದಿಷ್ಟ ವಿಷಯಾಧಾರಿತ ಚರ್ಚೆಗಳನ್ನು ಸಂಘಟಿಸಲು ಮತ್ತು ಮುನ್ನಡೆಸಲು ಸ್ವಯಂ ಪ್ರೇರಿತರಾಗಿರುವ ನಾಲ್ಕು ದೇಶಗಳಲ್ಲಿ ಭಾರತವೂ ಇದೆ ಎಂದು ಶ್ವೇತಭವನ ಹೇಳಿದೆ.

ವಾಷಿಂಗ್ಟನ್ (ಯುಎಸ್):ರಾನ್ಸಮ್‌ವೇರ್ ಅನ್ನು ಎದುರಿಸಲು ಬೈಡನ್ ಆಡಳಿತವು ಆಯೋಜಿಸಿದ ಅಂತಾರಾಷ್ಟ್ರೀಯ ಸಭೆಯಲ್ಲಿ ನಿರ್ದಿಷ್ಟ ವಿಷಯಾಧಾರಿತ ಚರ್ಚೆಗಳನ್ನು ಸಂಘಟಿಸಲುಮತ್ತು ಮುನ್ನಡೆಸಲು ಸ್ವಯಂಪ್ರೇರಿತರಾಗಿರುವ ನಾಲ್ಕು ದೇಶಗಳಲ್ಲಿ ಭಾರತವೂ ಒಂದು. ಈ ಮಹತ್ವದ ವಿಷಯವನ್ನ ಶ್ವೇತಭವನವೇ ಸ್ಪಷ್ಟಪಡಿಸಿದೆ.

ಈ ಮುಖ್ಯ ಸಭೆಯಲ್ಲಿ ಸೈಬರ್ ಪ್ರಪಂಚದಲ್ಲಿ ಎದುರಾಗುವ ಸವಾಲುಗಳನ್ನು ಪರಿಹರಿಸಲು ನಾಲ್ಕು ಭಾಗಗಳ ಕಾರ್ಯತಂತ್ರವನ್ನು ರೂಪಿಸಲಾಗುತ್ತದೆ ಎಂದು ಶ್ವೇತಭವನ ಬುಧವಾರ ತಿಳಿಸಿದೆ.

30ಕ್ಕೂ ಹೆಚ್ಚು ರಾಷ್ಟ್ರಗಳು ಸಭೆಯಲ್ಲಿ ಭಾಗಿ

ರಾನ್ಸಮ್‌ವೇರ್ ಅನ್ನು ಎದುರಿಸಲು ಸಹಕಾರ ವೇಗಗೊಳಿಸಲು 30 ಕ್ಕೂ ಹೆಚ್ಚು ದೇಶಗಳು ಮತ್ತು ಯುರೋಪಿಯನ್ ಒಕ್ಕೂಟದ ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಎರಡು ದಿನಗಳ ಸಭೆ ಗುರುವಾರ ಕೊನೆಗೊಳ್ಳುತ್ತದೆ. ರಾನ್ಸಮ್‌ವೇರ್ ಹಂಚಿಕೆಯ ಬೆದರಿಕೆಯನ್ನು ಎದುರಿಸಲು ಮಿತ್ರರಾಷ್ಟ್ರಗಳು ಮತ್ತು ಪಾಲುದಾರರನ್ನು ಒಟ್ಟುಗೂಡಿಸಲು ಅಧ್ಯಕ್ಷ ಜೋ ಬೈಡನ್ ಅವರ ನಾಯಕತ್ವ ನಿರ್ಧರಿಸಿದೆ.

ರಾಷ್ಟ್ರಗಳ ಒಗ್ಗೂಡಿಕೆಗೆ ಈ ವೇದಿಕೆ ಸಹಕಾರಿ

ನಾವು ಇದನ್ನು ಕೇವಲ ಯುಎಸ್ ಉಪಕ್ರಮವಾಗಿ ನೋಡುವುದಿಲ್ಲ. ವಾಸ್ತವವಾಗಿ, ನಾವು ಇತರ ದೇಶಗಳನ್ನು ಒಟ್ಟುಗೂಡಿಸುತ್ತಿದ್ದೇವೆ. ನಿರ್ದಿಷ್ಟವಾಗಿ ನಾಲ್ಕು ರಾಷ್ಟ್ರಗಳು ನಿರ್ದಿಷ್ಟ ವಿಷಯದ ಚರ್ಚೆಗಳನ್ನು ಮುನ್ನಡೆಸಲು ಮತ್ತು ಸಂಘಟಿಸಲು ಸ್ವಯಂಪ್ರೇರಿತರಾಗಿವೆ.

ಸ್ಥಿತಿಸ್ಥಾಪಕತ್ವದ ವಿಷಯವನ್ನು ಭಾರತ ನೋಡಿಕೊಂಡರೆ, ಆಸ್ಟ್ರೇಲಿಯಾ ಸಮಸ್ಯೆಗಳು ಹಾಗೂ ಆಗು ತೊಂದರೆಗಳನ್ನ ಪತ್ತೆ ಹಚ್ಚುವ ಹಾಗೂ, ಇಂಗ್ಲೆಂಡ್​ ವರ್ಚುಯಲ್ ಕರೆನ್ಸಿ ಸಂಬಂಧಿತ ಕೆಲಸ ಮತ್ತು ಜರ್ಮನಿ ರಾಜತಾಂತ್ರಿಕತೆ ವಿಚಾರವಾಗಿ ಚರ್ಚೆಯನ್ನು ನಡೆಸುತ್ತವೆ" ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ದಿನಗಳ ಕೂಟದಲ್ಲಿ ಭಾಗವಹಿಸುವ ದೇಶಗಳಲ್ಲಿ ಆಸ್ಟ್ರೇಲಿಯಾ, ಬ್ರೆಜಿಲ್, ಬಲ್ಜೀರಿಯಾ, ಕೆನಡಾ, ಜೆಕ್ ಗಣರಾಜ್ಯ, ಡೊಮಿನಿಕನ್ ಗಣರಾಜ್ಯ, ಎಸ್ಟೋನಿಯಾ, ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ಭಾರತ, ಐರ್ಲೆಂಡ್, ಇಸ್ರೇಲ್, ಇಟಲಿ, ಜಪಾನ್, ಕೀನ್ಯಾ, ಲಿಥುವೇನಿಯಾ, ಮೆಕ್ಸಿಕೋ, ನೆದರ್ಲ್ಯಾಂಡ್, ನ್ಯೂಜಿಲ್ಯಾಂಡ್, ನೈಜೀರಿಯಾ, ಪೋಲೆಂಡ್, ದಕ್ಷಿಣ​ ಕೊರಿಯಾ, ರೊಮೇನಿಯಾ, ಸಿಂಗಾಪುರ್, ದಕ್ಷಿಣ ಆಫ್ರಿಕಾ, ಸ್ವೀಡನ್, ಸ್ವಿಟ್ಜರ್ಲೆಂಡ್, ಉಕ್ರೇನ್, ಯುಎಇ ಮತ್ತು ಯುಕೆ ಗಳು ಸೇರಿವೆ.

ಯಾಕಾಗಿ ಈ ಸಭೆ?

ಈಗ ಹೇಳಿ ಕೇಳಿ ಇದು ಇಂಟರ್​ನೆಟ್​ ಕಾಲ, ಎಲ್ಲ ವ್ಯವಹಾರ ಈ ಅಂತರ್ಜಾಲದ ಮೂಲಕವೇ ನಡೆಯುತ್ತಿದೆ. ಈ ಡಿಜಿಟಲ್ ವ್ಯವಹಾರಕ್ಕೆ ಕನ್ನ ಹಾಕಲು ರಾನ್ಸಮ್‌ವೇರ್ ಕಾಟ ಕೊಡುತ್ತಿದೆ. ಈ ಹಾವಳಿ ತಡೆಗಟ್ಟಲು ಹಾಗೂ ಹ್ಯಾಕರ್ಸ್​ಗಳನ್ನು ತಡೆಗಟ್ಟಲು ವಿಶ್ವದ ಪ್ರಬಲ ರಾಷ್ಟ್ರಗಳು ಮುಂದಾಗಿವೆ. ಇದೇ ವಿಷಯವಾಗಿ ಈಗ ಈ ಸಭೆ ಆಯೋಜನೆ ಆಗಿದೆ.

ಶಾಲೆಗಳು, ಬ್ಯಾಂಕುಗಳು, ಸರ್ಕಾರಿ ಕಚೇರಿಗಳು, ತುರ್ತು ಸೇವೆಗಳು, ಆಸ್ಪತ್ರೆಗಳು, ಇಂಧನ ಕಂಪನಿಗಳು, ಸಾರಿಗೆ ಮತ್ತು ಆಹಾರ ಕಂಪನಿಗಳ ಮೇಲೆ ಈ ವೈರಸ್​​ಗಳು ಪರಿಣಾಮ ಬೀರುತ್ತವೆ. ಲಾಭದಾಯಕ ಹಾಗೂ ಅತ್ಯಂತ ಅಗತ್ಯ ಸೇವೆಗಳನ್ನು Ransomware ದಾಳಿಕೋರರು ಗುರಿಯಾಗಿಸಿಕೊಂಡಿದ್ದಾರೆ.

ಎಲ್ಲಿಂದಲೋ ಕುಳಿತು ಚೋರರು ದೇಶಗಳ ಅರ್ಥ ವ್ಯವಸ್ಥೆಯನ್ನೇ ಹಾಳು ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದನ್ನು ತಡೆಯಲು ಈಗ ಪೆಂಟಗನ್​ ಮುಂದಾಗಿದೆ. ಈ ಪರಿಣಾಮ ಈ ನಿರ್ಣಾಯಕ ಸಭೆ ಏರ್ಪಡಿಸಲಾಗಿದ್ದು, ಭಾರತವೂ ಪ್ರಮುಖ ಪಾತ್ರ ವಹಿಸುತ್ತಿದೆ.

2020 ರಲ್ಲಿ ಆದ ನಷ್ಟವೆಷ್ಟು ಗೊತ್ತಾ?

ರ್ಯಾನ್ಸಮ್‌ವೇರ್ ನಿಂದ 2020ರಲ್ಲಿ ಸುಮಾರು 400 ಮಿಲಿಯನ್‌ ಅಮೆರಿಕನ್ ಡಾಲರ್​​​​ನಷ್ಟು ನಷ್ಟವಾಗಿದೆ. ಅಷ್ಟೇ ಅಲ್ಲ 2021 ರ ಮೊದಲ ತ್ರೈಮಾಸಿಕದಲ್ಲಿ 81 ದಶಲಕ್ಷದಷ್ಟು ಅಮೆರಿಕನ್​​ ಡಾಲರ್​​ನಷ್ಟು ನಷ್ಟವನ್ನು ವಿವಿಧ ಹಣಕಾಸು ಸಂಸ್ಥೆಗಳು, ಸಂಘಟನೆಗಳು ನಷ್ಟ ಅನುಭವಿಸಿವೆ.

ABOUT THE AUTHOR

...view details