ವಾಷಿಂಗ್ಟನ್ (ಅಮೆರಿಕ) : ಜನವರಿ 20 ರಂದು ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಹಾಗೂ ಉಪಾಧ್ಯಕ್ಷರಾಗಿ ಕಮಲ ಹ್ಯಾರಿಸ್ ಪ್ರಮಾಣವಚನ ಸ್ವೀಕರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಾರ್ಯಕ್ರಮಕ್ಕೆ ಹಾಜರಾಗುವ ಅತಿಥಿಗಳಿಗೆ ವಿಶೇಷ ಖಾದ್ಯಗಳನ್ನು ತಯಾರಿಸಲಾಗುತ್ತಿದೆ. ಅಡುಗೆ ತಯಾರಿಯನ್ನು ಸ್ಯಾನ್ ಫ್ರಾನ್ಸಿಸ್ಕೊ ಮೂಲದ ಬಾಣಸಿಗ ರಾಬರ್ಟ್ ಡಾರ್ಸಿಯವರಿಗೆ ವಹಿಸಲಾಗಿದೆ. ಮೆನುವಿನಲ್ಲಿ ಕಮಲಾ ಹ್ಯಾರಿಸ್ಗೆ ಇಷ್ಟವಾದ ಗುಂಬೊ ಕೂಡ ಇರೋದು ಮತ್ತೊಂದು ವಿಶೇಷ.
ಕ್ಯಾಪ್ಸಿಕಂ, ಈರುಳ್ಳಿ, ಮಾಂಸ ಅಥವಾ ಚಿಪ್ಪುಮೀನುಗಳಿಂದ ತಯಾರಾದ ಸೂಪ್ ಈ ಗುಂಬೊ. ಇದು ಲೂಯಿಸಿಯಾನ ರಾಜ್ಯದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ.
ಬಾಣಸಿಗ ರಾಬರ್ಟ್ ಹಾಗೂ ಕಮಲಾ ಹ್ಯಾರಿಸ್ ಬಾಲ್ಯದಲ್ಲಿ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಇದೀಗ ಅವರೇ ತನ್ನ ಬಾಲ್ಯದ ಗೆಳತಿ ಅಮೆರಿಕದ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ವೇಳೆ ಅವರಿಗೆ ನೆಚ್ಚಿನ ಖಾದ್ಯ ತಯಾರಿಸುತ್ತಿರೋದು ನನ್ನ ಸೌಭಾಗ್ಯ. ಅಲ್ಲದೆ ಇಡೀ ಮೆನುವಿನಲ್ಲಿರುವ ಊಟವನ್ನು ಪ್ರಮಾಣ ವಚನಕ್ಕೂ ಒಂದು ದಿನ ಮುಂಚಿತವಾಗಿಯೇ ತಯಾರಿಸಲಾಗುತ್ತದೆ ಎಂದು ಡಾರ್ಸೆ ತಿಳಿಸಿದ್ದಾರೆ.
ಖಾದ್ಯಗಳ ಪಟ್ಟಿ:
ಪ್ಯಾಂಕೊ ಕ್ರಸ್ಟೆಡ್ ಕ್ರಾಬ್ ಕೇಕ್