ವಾಶಿಂಗ್ಟನ್:ಅಮೆರಿಕ ನೌಕಾಪಡೆಯ ಮಾನವರಹಿತ ಬೋಯಿಂಗ್ ಡ್ರೋನ್ ಹಾರಾಟದ ಸಮಯದಲ್ಲಿ ಯುದ್ದ ವಿಮಾನವೊಂದಕ್ಕೆ ಇಂಧನ ತುಂಬಿಸಿತು. ಇಂಥದ್ದೊಂದು ಪ್ರಯತ್ನ ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಯಿತು.
ಬೋಯಿಂಗ್ ಎಂ ಕ್ಯೂ-25 ಟಿ1 (MQ-25 T1) ಮಾನವರಹಿತ ಡ್ರೋನ್ (ವಿಮಾನ) ಜೂನ್ 4 ರಂದು ತನ್ನ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ಎಫ್/ಎ-18 (F/A-18) ಸೂಪರ್ ಹಾರ್ನೆಟ್ ಯುದ್ದ ವಿಮಾನಕ್ಕೆ ಆಕಾಶದಲ್ಲೇ ಇಂಧನ ತುಂಬಿಸಿದೆ. ಈ ಮೂಲಕ ಪ್ರಾಥಮಿಕ ಇಂಧನ ತುಂಬಿಸುವ ತನ್ನ ಸಾಮರ್ಥ್ಯವನ್ನು ಯಶಸ್ವಿಯಾಗಿ ತೋರ್ಪಡಿಸಿದೆ ಎಂದು ಟಿ1 ತಯಾರಕ ಕಂಪನಿ ಹೇಳಿದೆ.
ಬೋಯಿಂಗ್ ಟಿ 1 ಈಗಾಗಲೇ ತನ್ನ ವಾಯುಬಲ, ಆಕಾಶದಲ್ಲೇ ಇಂಧನ ತುಂಬಬಿಸುವುದು ಸೇರಿದಂತೆ ಹಲವು ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡುವ 25 ಪರೀಕ್ಷಾರ್ಥ ಹಾರಾಟಗಳನ್ನು ಪೂರ್ಣಗೊಳಿಸಿದೆ ಮತ್ತು ಹೆಚ್ಚಿನ ಪರೀಕ್ಷೆಗಾಗಿ ವರ್ಜೀನಿಯಾದ ವಿಮಾನವಾಹಕ ನೌಕೆಗೆ ವರ್ಷಾಂತ್ಯದ ವೇಳೆ ಅದನ್ನು ಕಳುಹಿಸಲು ನಿರ್ಧರಿಸಿದೆ ಎಂದು ಕಂಪನಿ ತಿಳಿಸಿದೆ.
ವಿಮಾನವನ್ನು ಅಭಿವೃದ್ಧಿಪಡಿಸಲು ಯುಎಸ್ ರಕ್ಷಣಾ ಇಲಾಖೆ 2018 ರಲ್ಲಿ ಬೋಯಿಂಗ್ ಕಂಪನಿಗೆ 805 ಮಿಲಿಯನ್ ಡಾಲರ್ಗೆ ಗುತ್ತಿಗೆ ನೀಡಿತ್ತು. ಎಂ ಕ್ಯೂ-25 ಟಿ1 ಮಿಲಿಟರಿ ಚಟುವಟಿಕೆಗಳಲ್ಲಿ ಡ್ರೋನ್ನ ಮಹತ್ವವನ್ನು ತಿಳಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಇಟ್ಟ ಮಹತ್ತರ ಹೆಜ್ಜೆಯಾಗಿದೆ. 2013ರಲ್ಲಿ ಮೊದಲ ಬಾರಿಗೆ ನಾರ್ತ್ರೋಪ್ ಗ್ರಮ್ಮನ್ ಎಕ್ಸ್ -47 ಬಿ (Northrop Grumman X-47B) ಎಂಬ ಡ್ರೋನ್ ಯುಎಸ್ ಸೇನೆಯಲ್ಲಿ ಬಳಸಲಾಯಿತು.
ಇದನ್ನೂಓದಿ: ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್..! ಏನಿದು ಮಹಾ ಸಾಹಸ?