ನ್ಯೂಯಾರ್ಕ್:ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವನ್ನು ಭಾರತದ 'ಅಧ್ಯಕ್ಷ' ಎಂದು ಸಂಬೋಧಿಸಿ ಎಡವಟ್ಟು ಮಾಡಿಕೊಂಡರು.
ಪ್ರಧಾನಿ ಮೋದಿಯನ್ನು 'ಅಧ್ಯಕ್ಷ' ಎಂದ ಇಮ್ರಾನ್ ಖಾನ್.. ಸಾಮಾನ್ಯ ಸಭೆಯಲ್ಲಿ ಎಡವಟ್ಟು ! - ಇಮ್ರಾನ್ ಖಾನ್
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವನ್ನು ಭಾರತದ ಅಧ್ಯಕ್ಷ ಎಂದು ಸಂಬೋಧಿಸಿದ್ದಾರೆ.
ಇಮ್ರಾನ್ ಖಾನ್
ನಿನ್ನೆ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ ಇಮ್ರಾನ್ ಖಾನ್ ಮಾತಿನ ವೇಳೆ 'ಅಧ್ಯಕ್ಷ ಮೋದಿ' ಎಂದು ಹೇಳಿದರು. ಸುಮಾರು 15ರಿಂದ 20 ನಿಮಿಷಗಳ ತಮ್ಮ ಭಾಷಣದ ವೇಳೆ ಭಾರತವನ್ನು ಟೀಕಿಸುವ ಭರದಲ್ಲಿ ಈ ಎಡವಟ್ಟು ಮಾಡಿದರು.
ಇನ್ನು, ಇಮ್ರಾನ್ ಖಾನ್ ಹೀಗೆ ತಪ್ಪಾಗಿ ಮಾತನಾಡಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಗಡಿಗಳ ಬಗ್ಗೆ ಮಾತನಾಡುವಾಗ ಜರ್ಮನಿ ಹಾಗೂ ಜಪಾನ್ ಪರಸ್ಪರ ಗಡಿಯಲ್ಲಿವೆ ಎಂದು ಹೇಳಿದ್ದರು. ಜರ್ಮನಿ ಹಾಗೂ ಫ್ರಾನ್ಸ್ ಎನ್ನುವ ಬದಲು ಹೀಗೆಂದಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರಾಲ್ಗೊಳಗಾಗಿದ್ದರು.