ಹೈದರಾಬಾದ್: ಕೊರೊನಾ ಸಾಂಕ್ರಾಮಿಕವು ಮಾನವೀಯತೆಯ ಜೀವನ, ಜೀವನೋಪಾಯ, ಭರವಸೆಗಳು ಮತ್ತು ಆಕಾಂಕ್ಷೆಗಳ ಮೇಲೆ ಪರಿಣಾಮ ಬೀರುತ್ತಿದೆ. ದೇಶಗಳ ಆರ್ಥಿಕತೆ ಮತ್ತು ವಾಣಿಜ್ಯ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಕೋವಿಡ್-19 ಪರಿಣಾಮವು ಭಾರತದ ಭವಿಷ್ಯದ ಮೇಲೆ ಭೀಕರವಾಗಲಿದೆ ಎಂದು ಯುನಿಸೆಫ್ ಇತ್ತೀಚೆಗೆ ಎಚ್ಚರಿಸಿದೆ.
ಕಳೆದ ತಿಂಗಳು, ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ ಹರಡಿದ ಹಿನ್ನೆಲೆಯಲ್ಲಿ ಮಲೇರಿಯಾ, ಪೋಲಿಯೊ ಮುಂತಾದ ಕಾಯಿಲೆಗಳತ್ತ ಗಮನ ಹರಿಸಬೇಕೆಂದು ಕರೆ ನೀಡಿತ್ತು. ಮಕ್ಕಳ ಮೇಲೆ ಕೊರೊನಾ ಪರಿಣಾಮದ ಬಗ್ಗೆ ಯುನಿಸೆಫ್ ಕಠೋರವಾಗಿ ಚಿತ್ರಿಸಿದೆ.
ಲಾಕ್‌ಡೌನ್‌ಗಳು ಮತ್ತು ಕರ್ಫ್ಯೂಗಳ ಕಾರಣದಿಂದಾಗಿ, ಉದ್ಯೋಗಗಳು ಕಳೆದುಹೋಗಿವೆ ಮತ್ತು ಸಾಮಾನ್ಯ ಆರೋಗ್ಯ ಸೌಲಭ್ಯಗಳು ಲಭ್ಯವಿಲ್ಲ.
ಅಪೌಷ್ಟಿಕತೆ ಮತ್ತು ಹಸಿವಿನಿಂದಾಗಿ ಮಕ್ಕಳ ಸಾವು ಸಂಭವಿಸುವುದರಿಂದ ಪೋಷಕರ ಆದಾಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬ ಕಳವಳವನ್ನು ಯುನಿಸೆಫ್‌ನ ವ್ಯಕ್ತಪಡಿಸಿದೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ 118 ದೇಶಗಳಲ್ಲಿ ಮುಂದಿನ ಆರು ತಿಂಗಳಲ್ಲಿ ಹೆಚ್ಚುವರಿ ಆರು ಸಾವಿರ ಶಿಶುಗಳು ಪ್ರತಿದಿನ ಸಾಯುತ್ತವೆ ಎಂದು ತಿಳಿಸಿದೆ. ಇಥಿಯೋಪಿಯಾ, ಕಾಂಗೋ, ತಾಂಜಾನಿಯಾ, ನೈಜೀರಿಯಾ, ಉಗಾಂಡಾ, ಪಾಕಿಸ್ತಾನ, ಮುಂತಾದ ಹತ್ತು ದೇಶಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಲಾಗಿದೆ.
ಸರಿಯಾದ ಪೋಷಣೆ ಮತ್ತು ಮೂಲ ವೈದ್ಯಕೀಯ ಸೌಲಭ್ಯಗಳಿಲ್ಲದೇ ಮಕ್ಕಳ ಅಕಾಲಿಕ ಮರಣ ತಡೆಗಟ್ಟುವುದು ಆ ದೇಶಗಳ ಜವಾಬ್ದಾರಿಯಾಗಿದೆ. ಸಮಯಕ್ಕೆ ಸರಿಯಾಗಿ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಯುನಿಸೆಫ್ ಎಚ್ಚರಿಸಿದೆ.
ಕೊರೊನಾ ಬಿಕ್ಕಟ್ಟಿನಿಂದಾಗಿ, ಮಕ್ಕಳ ಆರೋಗ್ಯ ಮತ್ತಷ್ಟು ಕ್ಷೀಣಿಸುವುದು ಬಾಣಲೆಯಿಂದ ಬೆಂಕಿಗೆ ಬೀಳುವಂತಿದೆ. ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಮತ್ತು ದಿ ಲ್ಯಾನ್ಸೆಟ್ ಜರ್ನಲ್ ಇತ್ತೀಚೆಗೆ ನಡೆಸಿದ ಜಂಟಿ ಅಧ್ಯಯನವು ಮಧ್ಯ ಆಫ್ರಿಕಾ, ಚಾಡ್ ಮತ್ತು ಸೊಮಾಲಿಯಾದಂತಹ ದೇಶಗಳಲ್ಲಿ ಮಕ್ಕಳ ಆರೋಗ್ಯ ರಕ್ಷಣೆ ತುಂಬಾ ಕಳಪೆಯಾಗಿದೆ ಎಂದು ಘೋಷಿಸಿದೆ. ಅಂತಹ 180 ದೇಶಗಳ ಪಟ್ಟಿಯಲ್ಲಿ ಭಾರತ 131 ನೇ ಸ್ಥಾನದಲ್ಲಿದೆ.
ಅಪೌಷ್ಟಿಕತೆಯನ್ನು ತೊಡೆದುಹಾಕಲು ಕೈಗೊಂಡ ಒಂದು ಪ್ರಮುಖ ಯೋಜನೆಯಾದ 'ಪೋಷಣ್ ಅಭಿಯಾನ್' ಮತ್ತು ನಾಲ್ಕೂವರೆ ದಶಕಗಳವರೆಗೆ ಕಾರ್ಯನಿರ್ವಹಿಸುತ್ತಿರುವ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ (ಐಸಿಡಿಎಸ್) ಯೋಜನೆಯ ಸ್ಥಿತಿಯ ವಿಮರ್ಶೆಯ ಸಮಯ ಮತ್ತು ಲೋಪ- ದೋಷಗಳನ್ನು ಸರಿಪಡಿಸುವ ಸಮಯ ಇದಾಗಿದೆ.
ಪ್ರಸ್ತುತ 177 ದೇಶಗಳಲ್ಲಿ 130 ಕೋಟಿ ಮಕ್ಕಳು ಶಾಲೆಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಶಾಲೆಗಳಲ್ಲಿ ಮಧ್ಯಾಹ್ನದ ಊಟದಿಂದ ವಂಚಿತರಾದ ಮಕ್ಕಳ ಸಂಖ್ಯೆ ಕೋಟಿಗೆ ತಲುಪುತ್ತದೆ. 37 ದೇಶಗಳಲ್ಲಿ ಸುಮಾರು 12 ಕೋಟಿ ಮಕ್ಕಳಿಗೆ ದಡಾರ ಚುಚ್ಚುಮದ್ದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಅಂಕಿ - ಅಂಶಗಳು ಪ್ರಸ್ತುತ ಸಾಂಕ್ರಾಮಿಕ ರೋಗದಿಂದಾಗಿ ಅವರು ಒಡ್ಡಿಕೊಳ್ಳುವ ವ್ಯಾಪಕ ಅಪಾಯಗಳನ್ನು ತಿಳಿಸುತ್ತದೆ.
ದೇಶದಲ್ಲಿ ಸುಮಾರು ಶೇ 40ರಷ್ಟು ಮಕ್ಕಳಿಗೆ ಲಸಿಕೆಗಳು ಮತ್ತು ಜೀವಸತ್ವಗಳು ದೊರೆಯುತ್ತಿಲ್ಲ. ಈ ಪರಿಸ್ಥಿತಿಯಲ್ಲಿ, ಮಕ್ಕಳ ಮರಣವನ್ನು ತಡೆಯಲು ಸರ್ಕಾರ ಕೈಗೊಂಡ ಕಾಳಜಿಯು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಸುಸ್ಥಿರ ಮಾನವ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಮಕ್ಕಳ ಕಲ್ಯಾಣ ಪ್ರಮುಖ ಅಂಶವಾಗಿದೆ. ವ್ಯವಸ್ಥೆಗಳನ್ನು ನಿರ್ವಹಿಸುವುದರ ಜೊತೆಗೆ, ಮಕ್ಕಳನ್ನು ರಕ್ಷಿಸುವುದರ ಜೊತೆಗೆ, ಭವಿಷ್ಯದ ಪೀಳಿಗೆಯನ್ನು ರಕ್ಷಿಸುವುದು ಸರ್ಕಾರದ ಪ್ರಧಾನ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಅದು ಹೇಳಿದೆ.