ನ್ಯೂಯಾರ್ಕ್:ಭಾರತದಲ್ಲಿ ಉತ್ಪಾದನೆಯಾದ ಕೋವಿಶೀಲ್ಡ್(Covishield) ವ್ಯಾಕ್ಸಿನ್ನ ಎರಡೂ ಡೋಸ್ಗಳನ್ನು ತೆಗೆದುಕೊಂಡಿರುವುದಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಾಹೀದ್ ಹೇಳಿದ್ದಾರೆ.
ಶುಕ್ರವಾರ ತಮ್ಮ ಮೊದಲ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಶೀಲ್ಡ್ ವ್ಯಾಕ್ಸಿನ್ಗೆ ಎಷ್ಟು ರಾಷ್ಟ್ರಗಳು ಮಾನ್ಯತೆ ನೀಡಿವೆ ಎಂಬುದು ನನಗೆ ತಿಳಿದಿಲ್ಲ. ಆದರೆ ದೇಶದ ಬಹುಪಾಲು ರಾಷ್ಟ್ರಗಳು ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಪಡೆದಿವೆ ಎಂದಿದ್ದಾರೆ.
ಯಾವುದೇ ಕೋವಿಡ್ ವ್ಯಾಕ್ಸಿನ್ ಅನ್ನು ಉಪಯೋಗಿಸುವಾಗ ಅದು ಯಾವಾಗ ಮಾನ್ಯತೆ ಪಡೆದಿದೆ ಎಂಬ ಪ್ರಶ್ನೆ ಎದುರಾಗುತ್ತೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡಿದಾಗ ಮಾತ್ರ ಅದು ಮಾನ್ಯತೆಯೇ ಅಥವಾ ಬೇರೊಂದು ಸಂಸ್ಥೆ ಮಾನ್ಯತೆ ನೀಡಬೇಕೆ? ಎಂಬ ಪ್ರಶ್ನೆಗೆ 'ನಾನು ಕೋವಿಶೀಲ್ಡ್ ತೆಗೆದುಕೊಂಡು ಬದುಕಿದ್ದೇನೆ. ಇದು ವೈದ್ಯಕೀಯ ತಜ್ಞರಿಗೆ ಬಿಟ್ಟ ವಿಚಾರ' ಎಂದು ನಗುತ್ತಾ ಉತ್ತರ ನೀಡಿದ್ದಾರೆ.