ವಾಷಿಂಗ್ಟನ್ :ನನ್ನ ಆರೋಗ್ಯವು 20 ವರ್ಷ ಹಿಂದಿಗಿಂತ ಉತ್ತಮವಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ವಾಷಿಂಗ್ಟನ್ನ ವಾಲ್ಟರ್ ರೀಡ್ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ಟ್ರಂಪ್ ಕೋವಿಡ್-19ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. 'ನಾನು ಇಂದು ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರದಿಂದ ಸಂಜೆ 6:30ಕ್ಕೆ ಹೊರಡುತ್ತೇನೆ. ನಾನು ಆರಾಮಾಗಿದ್ದೇನೆ, ಕೋವಿಡ್‌ಗೆ ಹೆದರಬೇಡಿ. ಅದಕ್ಕೆ ನಿಮ್ಮ ಜೀವನದಲ್ಲಿ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ನನ್ನ ಆಡಳಿತದಡಿ ಕೆಲವು ಉತ್ತಮ ಔಷಧಗಳನ್ನು ಅಭಿವೃದ್ಧಿಪಡಿಸಿದ್ದೇವೆ' ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.