ವಾಷಿಂಗ್ಟನ್ ( ಯುಎಸ್) : ಕೊರೊನಾ ವೈರಸ್ಗೆ ಲಸಿಕೆ ಕಂಡು ಹಿಡಿಯಲು ಪ್ರಸಿದ್ದ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಸಿದ್ದತೆ ನಡೆಸಿದ್ದು, ಸೆಪ್ಟೆಂಬರ್ ವೇಳೆಗೆ ಮಾನವನ ಮೇಲೆ ಪ್ರಯೋಗ ಮಾಡಲು ಚಿಂತನೆ ನಡೆಸಲಾಗಿದೆ. ಮುಂದಿನ ವರ್ಷದ ಆರಂಭದ ವೇಳೆ ಬಳಕೆಗೆ ಸಿದ್ಧವಾಗಲಿದೆ.
ಕೊರೊನಾ ವೈರಸ್ಗೆ ಲಸಿಕೆ ಕಂಡು ಹಿಡಿಯಲು ಮುಂದಾದ ಜಾನ್ಸನ್ ಅಂಡ್ ಜಾನ್ಸನ್ - Human testing for Johnson & Johnson coronavirus vaccine this fall
ಮಾರಣಾಂತಿಕ ಕೊರೊನಾ ವೈರಸ್ಗೆ ಲಸಿಕೆ ಕಂಡು ಹಿಡಿಯಲು ಜಗತ್ತಿನಾದ್ಯಂತ ಪ್ರಯತ್ನಗಳು ನಡೆಯುತ್ತಿರುವ ಮಧ್ಯೆಯೇ ಪ್ರಖ್ಯಾತ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಕೂಡ ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷಾರಂಭದಲ್ಲಿ ಲಸಿಕೆಯು ಬಳಕೆಗೆ ಲಭ್ಯವಾಗಲಿದೆ.

Human testing for Johnson & Johnson coronavirus vaccine this fall
ಈ ಹೊಸ ಪ್ರಯೋಗಕ್ಕೆ ಯುಎಸ್ ಸರ್ಕಾರದ ಬಯೋಮೆಡಿಕಲ್ ಅಡ್ವಾನ್ಸ್ಡ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಅಥಾರಿಟಿಯೊಂದಿಗೆ ಸಂಸ್ಥೆಯು 1 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯು Ad26 SARS-CoV-2 ಲಸಿಕೆಯನ್ನು ಕಂಡು ಹಿಡಿಯಲು ತಯಾರಿ ನಡೆಸಿದ್ದು, ಎಬೋಲಾ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ಬಳಸಿದ ತಂತ್ರಜ್ಞಾವನ್ನೇ ಇಲ್ಲೂ ಬಳಸಲು ತೀರ್ಮಾನಿಸಿದೆ.