ವಾಷಿಂಗ್ಟನ್(ಅಮೆರಿಕ):ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಕ್ಯಾಪಿಟಲ್ ಕಟ್ಟಡದ ಮೇಲೆ ಟ್ರಂಪ್ ಬೆಂಬಲಿಗರಿಂದ ದಾಳಿ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಮೆರಿಕ ಸಂಸತ್ನ ಸದನ ಸಮಿತಿಯೊಂದು 11 ಮಂದಿ ಅಧಿಕಾರಿಗಳಿಗೆ ಸಮನ್ಸ್ ನೀಡಿದೆ.
ಎಲ್ಲ 11 ಮಂದಿ ಅಧಿಕಾರಿಗಳು ಡೊನಾಲ್ಡ್ ಟ್ರಂಪ್ ಪರವಾಗಿ ನಡೆದ ಸಭೆ, ರ್ಯಾಲಿಗಳಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಅವರಿಗೆ ಸಮನ್ಸ್ ನೀಡಿ, ಕೋರ್ಟ್ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಹಿಂದಿನ ವಾರವಷ್ಟೇ ಶ್ವೇತಭವನದ ಮಾಜಿ ಅಧಿಕಾರಿಗೆ ಸಮನ್ಸ್ ನೀಡಲಾಗಿತ್ತು. ಕ್ಯಾಪಿಟಲ್ ಮೇಲೆ ದಾಳಿ ನಡೆದ ವೇಳೆಯಲ್ಲಿ ಮತ್ತು ದಾಳಿಯ ನಂತರ ಡೊನಾಲ್ಡ್ ಟ್ರಂಪ್ ಜೊತೆಗೆ ಈ ಅಧಿಕಾರಿ ಸಂಪರ್ಕದಲ್ಲಿದ್ದ ಆರೋಪದಲ್ಲಿ ಸಮನ್ಸ್ ನೀಡಲಾಗಿದೆ.
ತನಿಖಾ ಸಮಿತಿಗೆ ಮಿಸ್ಸಿಸ್ಸಿಪ್ಪಿ ಪ್ರತಿನಿಧಿ ಬೆನ್ನೀ ಥಾಂಪ್ಸನ್ ಅಧ್ಯಕ್ಷರಾಗಿದ್ದು, ಕ್ಯಾಪಿಟಲ್ ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಮತ್ತು ಅದಕ್ಕೂ ಮೊದಲು ಯಾವ ಯಾವ ರೀತಿಯ ವಿದ್ಯಮಾನಗಳು ಜರುಗಿದ್ದವು ಎಂಬ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ.
ಇದನ್ನೂ ಓದಿ:ಪದ್ಮಾ ನದಿಯಲ್ಲಿ ದೋಣಿ ಮಗುಚಿ ನಾಲ್ವರು ಮೃತ..11 ಮಂದಿ ನಾಪತ್ತೆ