ಸಲೇಂ(ಅಮೆರಿಕ): ಪೂರ್ವ ಒರೆಗಾನ್ ನಗರದಲ್ಲಿ ಗುಂಡಿನ ಮೊರೆತ ಕೇಳಿ ಬಂದಿದ್ದು, ಹಲವರು ಗುಂಡೇಟಿಗೆ ಬಲಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳವನ್ನು ಸುತ್ತುವರೆದು ಪ್ರತಿದಾಳಿ ನಡೆಸಿ ದುಷ್ಕರ್ಮಿಗಳನ್ನು ಹೊಡೆದುರುಳಿಸಿದ್ದಾರೆ.
ಅಮೆರಿಕದ ಒರೆಗಾನ್‌ನಲ್ಲಿ ಗುಂಡಿನ ದಾಳಿ: ಹಲವು ಮಂದಿ ಸಾವು - ಒರೆಗಾನ್ ಪೊಲೀಸರು
ಅಮೆರಿಕದ ಸಲೇಂ ನಗರದ ಪೂರ್ವ ಒರೆಗಾನ್ ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಹಲವರು ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ದುಷ್ಕರ್ಮಿಗಳನ್ನು ಹೊಡೆದುರುಳಿಸಿದ್ದಾರೆ.
ಅಮೆರಿಕದ ಒರೆಗಾನ್‌ನಲ್ಲಿ ಗುಂಡಿನ ದಾಳಿ: ಹಲವರು ಸಾವು!
ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಈ ದಾಳಿ ನಡೆದಿದೆ. ಯಾವ ಕಾರಣಕ್ಕೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂಬುದು ಇನ್ನೂ ಸ್ಫಷ್ಟವಾಗಿಲ್ಲ ಎಂದು ಸ್ಥಳೀಯ ಅಧಿಕಾರಿ ಮೂಲಗಳು ತಿಳಿಸಿವೆ.
ಎಷ್ಟು ಮಂದಿ ಮೃತಪಟ್ಟಿದ್ದಾರೆ, ಶೂಟೌಟ್ ಮಾಡಿದವರು ಯಾರು, ದಾಳಿಯ ಉದ್ದೇಶ ಏನಾಗಿತ್ತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಒರೆಗಾನ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.