ವಾಷಿಂಗ್ಟನ್: ಸ್ಮಾರ್ಟ್ಫೋನ್ ಜಮಾನದಲ್ಲಿ ಭಾವನೆಗಳು ಡೇಟಿಂಗ್ ಆ್ಯಪ್ಗಳಲ್ಲಿ ಎಗ್ಗಿಲ್ಲದೆ ಬಿಕರಿಯಾಗುತ್ತವೆ. ಭಾವನೆಗಳಿಗೆ ಜೋತುಬಿದ್ದು ಈ ಆ್ಯಪ್ಗಳ ಚಟಕ್ಕೆ ಬಿದ್ದರೆ ಏನಾಗುತ್ತೆ? ಎನ್ನುವುದನ್ನು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ.
ಡೇಟಿಂಗ್ ಕುರಿತು 269 ಮಂದಿಯನ್ನುಅಧ್ಯಯನಕ್ಕಾಗಿ ಒಳಪಡಿಸಲಾಗಿದೆ. ಇಂಥ ಆ್ಯಪ್ ಬಳಕೆಯಿಂದ ತರಗತಿ ಇಲ್ಲವೇ ಕಚೇರಿ ಕೆಲಸದ ಸಂದರ್ಭದಲ್ಲಿ ತೊಂದರೆ ಉಂಟಾಗುತ್ತಿದೆ ಎನ್ನುವುದನ್ನು ಜನರು ಹೇಳಿಕೊಂಡಿದ್ದಾರೆ. ಅಧ್ಯಯನಕ್ಕೆ ಒಳಪಟ್ಟ ಬಹುತೇಕ ಎಲ್ಲರೂ ಮುಖತಃ ಭೇಟಿಗಿಂತ ತಾವು ಆ್ಯಪ್ ಮೂಲಕ ಮಾತುಕತೆ ನಡೆಸಲು ಹೆಚ್ಚು ಇಷ್ಟಪಡುತ್ತಿರುವುದಾಗಿ ಹೇಳಿದ್ದಾರೆ.