ಆಂಕಾರೇಜ್ (ಯುಎಸ್):ಅಲಾಸ್ಕಾದ ಬ್ಯಾಕ್‌ಕಂಟ್ರಿಯಲ್ಲಿ ಹೆಲಿ - ಸ್ಕೈಯಿಂಗ್ ಪ್ರವಾಸದಲ್ಲಿ ಲಾಡ್ಜ್‌ನಿಂದ ಮಾರ್ಗದರ್ಶಕರು ಮತ್ತು ಅತಿಥಿಗಳನ್ನು ಕರೆದೊಯ್ಯುವ ಗುತ್ತಿಗೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಪೈಲಟ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಲಿಕಾಪ್ಟರ್ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಗಂಭೀರ ಸ್ಥಿತಿಯಲ್ಲಿದ್ದು, ಆಂಕಾರೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ಅಪಘಾತದಲ್ಲಿ ಮೃತಪಟ್ಟ ಐವರನ್ನು ಕೊಲೊರಾಡೋದ ಗ್ರೆಗೊರಿ ಹಾರ್ಮ್ಸ್ (52), ಜೆಕ್ ಗಣರಾಜ್ಯದ ಪೆಟ್ರ್ ಕೆಲ್ನರ್ (56) ಮತ್ತು ಬೆಂಜಮಿನ್ ಲಾರೊಚೈಕ್ಸ್ (50) ಮತ್ತು ಗಿರ್ಡ್‌ವುಡ್‌ನ 38 ವರ್ಷದ ಸೀನ್ ಮೆಕ್‌ಮನ್ನನಿ ಮತ್ತು ಪೈಲಟ್ ಆಂಕಾರೋಜ್‌ನ 33 ವರ್ಷದ ಜಕಾರಿ ರಸ್ಸೆಲ್ ಎಂದು ಗುರುತಿಸಲಾಗಿದೆ.