ಕರ್ನಾಟಕ

karnataka

ETV Bharat / international

Video: ಮಗುವಿನ ಜೊತೆ ದಂಪತಿ ಪ್ರಾಣ ಉಳಿಸಿದ ಅಪಘಾತ​! ಏನಿದು ಕೌತುಕ? - ಫೀನಿಕ್ಸ್​ನಲ್ಲಿ ದಂಪತಿ ಕಾಪಾಡಿದ ಅಪಘಾತ ಸುದ್ದಿ

ಸಾಧರಣವಾಗಿ ರಸ್ತೆ ಅಪಘಾತ ಸಂಭವಿಸಿದ್ರೆ ಪ್ರಾಣ ಹೋಗುವುದು ಅಥವಾ ಗಾಯವಾಗುವುದು ಸಾಮಾನ್ಯ. ಆದ್ರೆ ಇಲ್ಲಿ ಸಂಭವಿಸಿದ ಅಪಘಾತದಲ್ಲಿ ಮೂರು ಪ್ರಾಣಗಳು ಉಳಿದಿವೆ.

ಕೃಪೆ: Twitter

By

Published : Oct 26, 2019, 1:52 PM IST

ಫೀನಿಕ್ಸ್​:ಎಲ್ಲಿಯಾದ್ರೂ ಅಪಘಾತ ಸಂಭವಿಸಿದ್ರೆ ಪ್ರಾಣ ಹೋಗುವುದು ಅಥವಾ ಗಾಯವಾಗುವುದು ಸರ್ವೇ ಸಾಮಾನ್ಯ. ಆದ್ರೆ ಅಮೆರಿಕದ ಆರಿಜೋನಾ ರಾಜ್ಯದ ರಾಜಧಾನಿ ಫೀನಿಕ್ಸ್​ನಲ್ಲಿ ಸಂಭವಿಸಿದ ರಸ್ತೆ ಅಪಘಾತಯಲ್ಲಿ ಮೂವರು ಪ್ರಾಣ ಉಳಿದಿವೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ವೈರಲ್​ ಆಗ್ತಿರುವ ವಿಡಿಯೋದಲ್ಲಿ ಒಂದು ಕಡೆಯಿಂದ ಕಾರು ವೇಗವಾಗಿ ಬರುತ್ತಿದೆ. ಸಿಗ್ನಲ್​ ಬಿದ್ದಿದ್ದರೂ ಸಹ ಚಾಲಕ ಕಾರನ್ನು ವೇಗವಾಗಿ ಓಡಿಸುತ್ತಿದ್ದ. ಇನ್ನೊಂದು ಮಗುವನ್ನು ಹಿಡಿದುಕೊಂಡು ದಂಪತಿ ರಸ್ತೆ ದಾಟುತ್ತಿದ್ದರು. ಇನ್ನೇನೂ ಆ ಮೂವರಿಗೆ ಕಾರು ಡಿಕ್ಕಿ ಹೊಡೆಯಬೇಕು ಅನ್ನುವಷ್ಟರಲ್ಲಿ ಯಾರೋ ಕಳುಹಿಸಿದಂತೆ ಮತ್ತೊಂದು ಕಾರು ಆ ಕಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಎರಡು ಕಾರುಗಳು ರಸ್ತೆ ಪಕ್ಕಕ್ಕೆ ಸರಿದವು. ಈ ಘಟನೆಯಿಂದ ಮಗುವಿನ ಜೊತೆ ರಸ್ತೆ ದಾಟುತ್ತಿದ್ದ ದಂಪತಿಯ ಪ್ರಾಣ ಉಳಿಯಿತು. ಇಲ್ಲವಾದಲ್ಲಿ ಮೂವರು ರಸ್ತೆ ಅಪಘಾತಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿತ್ತು. ಇನ್ನು ಈ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ವೇಗವಾಗಿ ಚಲಿಸುತ್ತಿದ್ದ ಕಾರಿನ ಚಾಲಕ ಕುಡಿದ ಮತ್ತಿನಲ್ಲಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಅಪಘಾತದ ವಿಡಿಯೋ ಫಿನಿಕ್ಸ್​ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ‘ಬಹುಶ: ಚೆವೀ ಕ್ರೂಜ್​ ಕಾರಿನ ರೂಪದಲ್ಲಿ ದೇವದೂತನೊಬ್ಬ ಇಂಡಿಯನ್​ ಸ್ಕೂಲ್​ ರಿಂಗ್​ರೋಡ್​ ಬಳಿ ಮಗುವಿನ ಜೊತೆ ರಸ್ತೆ ದಾಟುತ್ತಿದ್ದ ದಂಪತಿಯ ಪ್ರಾಣ ಕಾಪಾಡಿರಬಹುದು’ ಎಂದು ಪೊಲೀಸರು ಪೋಸ್ಟ್​ ಹಾಕಿದ್ದಾರೆ. ಪೊಲೀಸರ ಪೋಸ್ಟ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ABOUT THE AUTHOR

...view details