ಲಂಡನ್:ವಿಕೃತ, ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿರುವ ಪೀತ ಪತ್ರಿಕೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವಪ್ರಿನ್ಸ್ ಹ್ಯಾರಿ ಮತ್ತು ಪತ್ನಿ ಮೇಘನ್ ಅವರು ಇನ್ನುಮುಂದೆ ಬ್ರಿಟಿಷ್ ಟ್ಯಾಬ್ಲಾಯ್ಡ ಗಳಿಗೆ ಸಹಕರಿಸುವುದಿಲ್ಲ ಎಂದು ಹೇಳಿದ್ದಾರೆ.
ಟ್ಯಾಬ್ಲಾಯ್ಡ್ಗಳಿಂದ ಬೇಸತ್ತಿದ್ದಾರಂತೆ ಪ್ರಿನ್ಸ್ ಹ್ಯಾರಿ, ಮೇಘನ್... ಕಾರಣ ಏನು? - ಯುಕೆ ಟ್ಯಾಬ್ಲಾಯ್ಡ್ ಗಳು
ಮೇಘನ್ ಮತ್ತು ರಾಜಕುಮಾರ ಹ್ಯಾರಿ ದಂಪತಿ ಬ್ರಿಟಿಷ್ ಮಾಧ್ಯಮದಿಂದ ಹಲವಾರು ಬಾರಿ ಕಿರುಕುಳಕ್ಕೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತನ್ನ ತಾಯಿ ರಾಜಕುಮಾರಿ ಡಯಾನಾಳ ಸಾವಿಗೆ ಮಾಧ್ಯಮವೇ ಕಾರಣ ಎಂದು ಬಲವಾಗಿ ಪ್ರತಿಪಾದಿಸುವ ಅವರು, 1997 ರಲ್ಲಿ ಪ್ಯಾರಿಸ್ನಲ್ಲಿ ಪಾಪರಾಜಿಗಳು ಹಿಂಬಾಲಿಸುತ್ತಿದ್ದಾಗ ನಡೆದ ಕಾರು ಅಪಘಾತದಲ್ಲಿ ಡಯಾನಾ ಸಾವಿಗೀಡಾರು ಎಂದಿದ್ದಾರೆ.

ಮಾಧ್ಯಮಗಳೊಂದಿಗೆ ಅಷ್ಟೊಂದು ಒಳ್ಳೆ ಸಂಬಂಧ ಹೊಂದಿರದ ಹ್ಯಾರಿ ದಂಪತಿ, ಪತ್ರಿಕೆಗಳಾದ ದಿ ಸನ್, ಡೈಲಿ ಮೇಲ್, ಡೈಲಿ ಎಕ್ಸ್‌ಪ್ರೆಸ್ ಮತ್ತು ಡೈಲಿ ಮಿರರ್‌ನ ಸಂಪಾದಕರಿಗೆ ಈ ಕುರಿತು ಪತ್ರ ಬರೆದಿದ್ದಾರೆ.